Sunday, September 27, 2026

BDA Apartments

ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧರಿಸುತ್ತೆ, ನಾವ್ಯಾಕೆ ತಲೆ ಕೆ...
Home Front Page ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧರಿಸುತ್ತೆ, ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು- ಹೆಚ್.ಡಿ ಕುಮಾರಸ್ವಾಮಿ.

ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧರಿಸುತ್ತೆ, ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು- ಹೆಚ್.ಡಿ ಕುಮಾರಸ್ವಾಮಿ.

ಬಾಗಲಕೋಟೆ,ಮೇ,9,2022(www.justkannada.in):  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧರಾಮಯ್ಯ ಸ್ಪರ್ಧೆಗೆ ಹಲವು ಕಡೆಯಿಂದ ಆಹ್ವಾನಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧರಿಸುತ್ತೆ, ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡಿದವರು. ಅವರಿಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ ಎಂಬ ಭಾವನೆ ಇದೆ. ಕಾರ್ಯಕರ್ತರು ಸಿದ್ಧರಾಮಯ್ಯರನ್ನ ಸ್ಪರ್ಧಿಸುವಂತೆ ಕರೆಯುತ್ತಾರೆ.ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧರಿಸುತ್ತೆ talk war between siddaramaiah and kumarswamy

ಅವರು ಇಷ್ಟು ವರ್ಷ ಸುದೀರ್ಘ ರಾಜಕಾರಣ ಮಾಡಿದರು. ಕ್ಷೇತ್ರ ಹುಡುಕಾಟದ ಬಗ್ಗೆ ನಾನು ಹಗುರವಾಗಿ ಮಾತನಾಡಲ್ಲ.  ಅವರು ಎಲ್ಲಿ ಬೇಕಾದ್ರೂ ನಿಲ್ಲಬಹುದು ಗೆಲ್ಲಬಹುದು. ಮನುಷ್ಯನಿಗೆ ಸೋಲು ಗೆಲುವು ಸರ್ವೇ ಸಾಮಾನ್ಯ. ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧರಿಸುತ್ತದೆ. ಅದಕ್ಕೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದರು.

Key words: Siddaramaiah-contest –former cm-H. D. Kumaraswamy.