Friday, August 7, 2026

BDA Apartments

Home Cinema ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ನಲ್ಲಿ ಏಕದಿನ ವಿಶ್ವಕಪ್ ವಿಜಯದ ಕಥೆ ’83’ ರಿಲೀಸ್ !

ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ನಲ್ಲಿ ಏಕದಿನ ವಿಶ್ವಕಪ್ ವಿಜಯದ ಕಥೆ ’83’ ರಿಲೀಸ್ !

ಬೆಂಗಳೂರು, ಮಾರ್ಚ್ 21, 2022 (www.justkannada.in):  ರಣವೀರ್ ಸಿಂಗ್ ಅಭಿನಯದ, ಟೀಮ್ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಕುರಿತ ಕಥೆಯನ್ನು ಹೊಂದಿರುವ ’83’ ಸಿನಿಮಾ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

83 ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವ ಕುರಿತು, ಪ್ರಸಾರದ ಹಕ್ಕು ಕುರಿತಂತೆ ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಮಧ್ಯೆ ಸಮಸ್ಯೆ ಸೃಷ್ಟಿಯಾಗಿತ್ತು.

ಚಿತ್ರದ ಡಿಜಿಟಲ್ ಹಕ್ಕುಗಳು ಹಾಗೂ ಸೆಟಲೈಟ್ ಹಕ್ಕಿನ ಕುರಿತು ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಸಿನಿಮಾದ ಹಕ್ಕು ಮತ್ತು ಮಾಲೀಕತ್ವವು ಮ್ಯಾಡ್‌ ಮ್ಯಾನ್ ಫಿಲ್ಮ್ ವೆಂಚರ್ಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ವೈಬ್ರಿ ಮೀಡಿಯಾಗಳ ಮಧ್ಯೆ ಹಂಚಿಕೆಯಾಗಿದೆ.