Tuesday, September 22, 2026

BDA Apartments

ವಿಶೇಷಚೇತನ ಅಭಿಮಾನಿ ಭೇಟಿ ಮಾಡಿ ಸ್ಫೂರ್ತಿ ತುಂಬಿದ ಚಾಲೆಂಜಿಂಗ್ ಸ್ಟಾರ್ BDA JK_...
Home Cinema ವಿಶೇಷಚೇತನ ಅಭಿಮಾನಿ ಭೇಟಿ ಮಾಡಿ ಸ್ಫೂರ್ತಿ ತುಂಬಿದ ಚಾಲೆಂಜಿಂಗ್ ಸ್ಟಾರ್

ವಿಶೇಷಚೇತನ ಅಭಿಮಾನಿ ಭೇಟಿ ಮಾಡಿ ಸ್ಫೂರ್ತಿ ತುಂಬಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಮಾರ್ಚ್ 21, 2022 (www.justkannada.in):  ನಟ ದರ್ಶನ್ ಅವರು ವಿಶೇಷಚೇತನ ಅಭಿಮಾನಿ ಮಧು ಅವರನ್ನು ಭೇಟಿ ಮಾಡಿ ಸ್ಪೂರ್ತಿ ತುಂಬಿದ್ದಾರೆ.

ದಾವಣೆಗೆರೆಯ ಮಧು ನಟ ದರ್ಶನ್‌ರ ಅಪ್ಪಟ ಅಭಿಮಾನಿ. ಆದರೆ ಅವರಿಗೆ ಅನಾರೋಗ್ಯ ಜೊತೆಗೆ ಅಂಗವೈಕಲ್ಯ. ಇಂತಹ ಸಂಕಷ್ಟದಲ್ಲಿದ್ದ ಅಭಿಮಾನಿಗೆ ದರ್ಶನ್ ಸ್ಫೂರ್ತಿ ತುಂಬಿದ್ದಾರೆ.

ಮನುಷ್ಯ ಇದ್ರೆ ಏನು ಬೇಕಾದರೂ ಸಾಧನೆ ಮಾಡಬಹುದು. ಮೊದಲು ನೀವು ಗಟ್ಟಿಯಾಗಬೇಕು. ಆಗ ಮಾತ್ರ ಏನನ್ನಾದರೂ ಸಾಧನೆ ಮಾಡಬಹುದು ಎಂದು ದರ್ಶನ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಅಭಿಮಾನಿಯನ್ನು ಕಾರಿನಲ್ಲಿ ಕುರಿಸಿಕೊಂಡು ಆತ್ಮೀಯತೆಯಿಂದ ಮಾತನಾಡಿರುವ ದರ್ಶನ್, ಆರೋಗ್ಯ ಸರಿಯಾಗಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.