Saturday, August 8, 2026

BDA Apartments

Home Front Page ಫಲಿತಾಂಶಕ್ಕೂ ಮೊದಲೇ ಗೋವಾ ಫ್ಲೈಟ್ ಹತ್ತಿದ್ರು: ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ರು- ಡಿಕೆಶಿ ಕಾಲೆಳೆದ ಸಿ.ಟಿ...

ಫಲಿತಾಂಶಕ್ಕೂ ಮೊದಲೇ ಗೋವಾ ಫ್ಲೈಟ್ ಹತ್ತಿದ್ರು: ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ರು- ಡಿಕೆಶಿ ಕಾಲೆಳೆದ ಸಿ.ಟಿ ರವಿ.

ಬೆಂಗಳೂರು,ಮಾರ್ಚ್,11,2022(www.justkannada.in):  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಒಂದೆರೆಡು ದಿನದ ಮುಂಚೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೈಕಮಾಂಡ್ ಸಲಹೆ ಮೇರೆಗೆ ಗೋವಾಗೆ ತೆರಳಿ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿಗಳ ರಕ್ಷಣೆಗೆ ಮುಂದಾಗಿದ್ದರು. ಈ ವಿಚಾರವನ್ನ ಪ್ರಸ್ತಾಪಿಸಿ ಇದೀಗ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಫಲಿತಾಂಶಕ್ಕೂ ಮುನ್ನ ಗೋವಾ ಫ್ಲೈಟ್ ಹತ್ತಿದ್ರು. ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ರು.  ಕಾಂಗ್ರೆಸ್ ನಾಯಕರು ಪತ್ರದೊಂದಿಗೆ ಬಂದಿದ್ರು. ಆದರೆ ಬಂದ ದಾರಿಗೆ ಸುಂಕ ಇಲ್ಲದಂತೆ ಹೋದರು ಹೋದರು ಎಂದು ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರ ಕಾಲೆಳೆದರು.

ಇನ್ನು ಕೆಲವರು ಈಗಲೇ ಕೋಟು ಸೂಟು ಹೊಲೆಸಿದ್ದಾರೆ. ಕೆಲವರು ಖಾತೆಗಳನ್ನ ನಿಗದಿ ಮಾಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಕನಸು ನನಸಾಗಲ್ಲ. ಕಾಂಗ್ರೆಸ್ ಅಭಿವೃದ್ದಿಹೀನ ರಾಜಕಾರಣ ನಡೆಯಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಜನಸ್ನೇಹಿ ಆಡಳಿತಕ್ಕೆ ಜನ ಮತ ಹಾಕಿದ್ದಾರೆ ಎಂದು ಸಿ.ಟಿ ರವಿ ತಿಳಿಸಿದರು.

Key words: bjp-CT Ravi-DK Shivakumar