ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢ: ಮುಂದಿನ ಚುನಾವಣೆಯಲ್ಲಿ ಬದಲಾವಣೆ ಆಗುತ್ತೆ- ಸಂಸದ ಡಿ.ಕೆ ಸುರೇಶ್.

ವಿಜಯಪುರ,ಮಾರ್ಚ್,11,2022(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಕುಗ್ಗಿದೆ ಎಂಬುದು ಸುಳ್ಳು ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. 2023ರ ಚುನಾವಣೆಯಲ್ಲಿ ಬದಲಾವಣೆ ಆಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ತಿಳಿಸಿದರು.

ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತೆ  ಸೋಲಿನ ಕಾರಣದ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡ್ತಾರೆ.  ಪಂಜಾಬ್ ನಲ್ಲಿ 6 ತಿಂಗಳಿಂದ ಗೊಂದಲ ಸೃಷ್ಟಿಯಾಗಿತ್ತು ಹೀಗಾಗಿ ಹಿನ್ನೆಡೆಯಾಗಿದೆ.  ಅದನ್ನ ಸರಿಪಡಿಸುವ ಕೆಲಸ ಆಗುತ್ತೆ ಎಂದರು.free rice - BPL card -holders - - Center- MP- DK Suresh

ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಡವಾಗಿದೆ. ಎಲ್ಲಾ ಚುನಾವಣೆಗಳು ಒಂದೇ ರೀತಿ ಇರಲ್ಲ . ಮತ್ತೆ ಎದ್ದು ಬರುವ ಸಾಮರ್ಥ‍್ಯ ನಮಗಿದೆ. ಸೂರ್ಯ ಚಂದ್ರರು ಹುಟ್ಟುತ್ತಾರೆ ಮುಳುಗುತ್ತಾರೆ.  ಎಲ್ಲದಕ್ಕೂ ಅಂತ್ಯ ಇದೆ. ಕಾಲ ಉತ್ತರ ನೀಡುತ್ತೆ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: congress-MP-DK Suresh