Sunday, August 2, 2026

BDA Apartments

Home Crime ಪತಿ ನೇಣಿಗೆ ಶರಣಾಗಿದ್ದನ್ನ ಕಂಡು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ…

ಪತಿ ನೇಣಿಗೆ ಶರಣಾಗಿದ್ದನ್ನ ಕಂಡು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ…

ಚಿತ್ರದುರ್ಗ, ಆ,3,2019(www.justkannada.in): ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ಪತ್ನಿ, ತನ್ನ ಮಗುವಿನೊಂದಿಗೆ ತಾನೂ ಆತ್ಮಹತ್ಯೆಗೆ  ಯತ್ನಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಮನೆಯಲ್ಲಿ ನಾರಾಯಣಪ್ಪ (35)  ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾರಾಯಣಪ್ಪ ಜಿಲ್ಲೆಯ ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು ಇಂದು ಬೆಳಿಗ್ಗೆ ಪತಿ ಆತ್ಮಹತ್ಯೆಯನ್ನು ಕಂಡು ಆಘಾತಗೊಂಡ ಪತ್ನಿ ರಮ್ಯಾ (30) ಸಹ  ಮಗುವಿನ ಜತೆ ಲಾರಿ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ಎರಡು ವರ್ಷದ ಹೆಣ್ಣುಮಗು ಸಾವನ್ನಪ್ಪಿದ್ದು ರಮ್ಯಾಗೆ ಗಂಭೀರ ಗಾಯಗಳಾಗಿವೆ. ರಮ್ಯಾರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಢಿ ಚಿಕಿತ್ಸೆ ನೀಡಲಾಗುತ್ತಿದೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Key words: Wife – attempted -suicide – child -her husband -surrendered -chitradurga