Tuesday, August 4, 2026

BDA Apartments

Home Front Page ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಪ್ರತಿಭಟನೆ.

ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಪ್ರತಿಭಟನೆ.

ಮೈಸೂರು,ಫೆಬ್ರವರಿ,3,2022(www.justkannada.in):  ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿರೋಧದ ನಡುವೆಯೂ ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟಸಿದ್ದು, ಫೆ.22ರಂದು ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ಹೀಗಾಗಿ ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿ  ನಡೆಗೆ ವೈದ್ಯಕೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಎಐಡಿಎಸ್ಓ ಬೆಂಬಲ ನೀಡಿದ್ದು, ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿ ವೈದ್ಯಕೀಯ ಸಚಿವ ಡಾ.ಸುಧಾಕರ್ ಕೂಡಾ ಪತ್ರ ಬರೆದಿದ್ದಾರೆ. ಆದರೆ ಸಚಿವರ ಮನವಿಯನ್ನು ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿ ನಿರ್ಲಕ್ಷ್ಯಿಸಿದೆ. ಕೂಡಲೇ ಪರೀಕ್ಷೆ ಮುಂದೂಡುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Key words: Protest -Mysore – final year- medical examination