Sunday, September 20, 2026

BDA Apartments

ಕೆ.ಎಸ್ ಓಯುಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’ BDA JK_Adv BDA Adv
Home Front Page ಕೆ.ಎಸ್ ಓಯುಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’

ಕೆ.ಎಸ್ ಓಯುಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’

ಮೈಸೂರು,ಜನವರಿ,25,2022(www.justkannada.in):  ಯುಜಿಸಿ-ದೂರ ಶಿಕ್ಷಣ ಸಂಸ್ಥೆಯವರು ದೇಶದ ದೂರ ಶಿಕ್ಷಣ ವಿಶ್ವವಿದ್ಯಾನಿಲಯಗಳ ಮೌಲ್ಯಮಾಪನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಅತ್ಯುತ್ತಮ ಶ್ರೇಣಿ ದೊರಕಿದೆ.

ಕರಾಮುವಿ ಮಾಡುತ್ತಿರುವ ಶೈಕ್ಷಣಿಕ ಆಡಳಿತಾತ್ಮಕ ಕಾರ್ಯಗಳಿಗೆ ಯುಜಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.  ಒಟ್ಟು 400 ಅಂಕದಲ್ಲಿ 300 ಅಂಕ ಕರಾಮುವಿಗೆ ಲಭಿಸಿದೆ. ಅದರಲ್ಲಿ ಅಧ್ಯಾಪಕರ ಶ್ರೇಣಿಗೆ 20ಕ್ಕೆ 19.85% ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರದ ಕಾರ್ಯಗಳಿಗೆ 10 ಕ್ಕೆ 09 ಅಂಕ ಲಭಿಸಿದೆ. ದಾಖಲಾತಿ ಮತ್ತು ಶುಲ್ಕಗಳಿಗೆ ಸಂಬಂಧಿಸಿದಂತೆ 20 ಕ್ಕೆ 20 ಅಂಕಗಳು ದೊರಕಿದೆ.

ಒಟ್ಟಾರೆ ಕರಾಮುವಿ ‘ಅತ್ಯುತ್ತಮ’ ಶ್ರೇಯಾಂಕ ಲಭಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರ ದೂರದರ್ಶಿತ್ವ ಆಡಳಿತ ಹಾಗೂ ವಿದ್ಯಾರ್ಥಿ ಶ್ರೇಯೋಭಿವೃದ್ಧಿಗೆ ಸಂದ ಗರಿಮೆಯಾಗಿದೆ ಎಂದು ಕರಾಮುವಿ ಸಿಐಕ್ಯೂಎ ನಿರ್ದೇಶಕ ಡಾ. ನಿರಂಜನ್‍ರಾ ಜ್ ಎಸ್ ಅವರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.

Key words: ranking – UGC – KSOU