ಹಾವೇರಿ,ಮೇ,9,2019(www.justkannada.in): ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ನಿರಂಜನಾನಂದ ಶ್ರೀಗಳು ನೀಡಿದ್ದ ಹೇಳಿಕೆ ತಪ್ಪಿಲ್ಲ ಸರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಹಾವೇರಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ಅವರು, ಮಠಾಧಿಪತಿಗಳು ಸಹ ಮತದಾರರಾಗಿದ್ದಾರೆ. ಹೀಗಾಗಿ ಅವರು ನೀಡಿರುವ ಹೇಳಿಕೆಯಲ್ಲಿ ತಪ್ಪಿಲ್ಲ. ಆದರೇ ಯಾವುದೇ ಪಕ್ಷದ ಪರ ವೋಟ್ ಹಾಕಿ ಅಂತ ಹೇಳಬಾರದರು. ಯಾರೋ ಒಬ್ಬರು ಸಿಎಂ ಆಗಲಿ ಎಂದು ಹೇಳೋದು ತಪ್ಪಿಲ್ಲ ಎಂದು ನುಡಿದರು.
ಇನ್ನು ಸಿದ್ದರಾಮಯ್ಯ ಅವರೇ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಮುಂದೆ ಜನ ಆಶೀರ್ವಾದ ಮಾಡಿದ್ರೆ ಸಿಎಂ ಆಗ್ತೇನೆ ಎಂದಿದ್ದಾರೆ. ಆ ರೀತಿ ಹೇಳಿಕೆ ನೀಡಿದ್ರೆ ತಪ್ಪಿಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
Key words: Siddaramaiah – again -CM. Niranjanananda Puri- statement – not wrong –H.Vishwanath.






