Sunday, August 23, 2026

BDA Apartments

Home Front Page ಆರೆಸ್ಸೆಸ್ ಮುಖಂಡರ ಭೇಟಿ: ರಮೇಶ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ?

ಆರೆಸ್ಸೆಸ್ ಮುಖಂಡರ ಭೇಟಿ: ರಮೇಶ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ?

ಬೆಂಗಳೂರು, ಜನವರಿ 16, 2022 (www.justkannada.in): ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರ ಆರೆಸ್ಸೆಸ್‌ ಮುಖಂಡ ಅರವಿಂದ ರಾವ್‌ ದೇಶಪಾಂಡೆ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಂದರ್ಭ ತಮ್ಮನ್ನು ಪರಿಗಣಿಸು ವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.  ಆದರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಿಷಯ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಆರೆಸ್ಸೆಸ್‌ ಹಿರಿಯ ಮುಖಂಡ ಅರವಿಂದಜೀ ಅವರನ್ನು ಸಂಕ್ರಮಣ ನಿಮಿತ್ತ ಭೇಟಿಯಾಗಿ ಶುಭ ಕೋರಿದ್ದೇ ನೆಯೇ ಹೊರತು ರಾಜಕಾರಣದ ಮಾತಿಲ್ಲ ಎಂದಿದ್ದಾರೆ.

ಸಂಪುಟದಲ್ಲಿ ಹೊಸಬರಿಗೆ ಅವಕಾಶದ ಜತೆಗೆ ಮಹೇಶ ಕುಮಠಳ್ಳಿ ಅಥವಾ ತಮಗೆ ಸಚಿವ ಸ್ಥಾನದ ವಿಚಾರವಾಗಿ ಮುಂತಾದವುಗಳನ್ನು ಚರ್ಚಿಸಿ ದ್ದೇವೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.