Monday, October 12, 2026

Dasara Wishes

Happy Dasara
Home Front Page ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆಲುವು: ಕಾಂಗ್ರೆಸ್ ಟಾಂಗ್ ಕೊಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆಲುವು: ಕಾಂಗ್ರೆಸ್ ಟಾಂಗ್ ಕೊಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ರಾಮನಗರ,ಡಿಸೆಂಬರ್,30,2021(www.justkannada.in):  ಇಂದು 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಈ ಮಧ್ಯೆ ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಬಿಡದಿ ಪುರಸಭೆಯ 23 ವಾರ್ಡ್ ಗಳ ಪೈಕಿ 14 ವಾರ್ಡ್‌ ಗಳಲ್ಲಿ ಜೆಡಿಎಸ್‌,  9 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿಡದಿ ಪುರಸಭೆಯಲ್ಲಿ ಖಾತೆ ತೆರೆಯುವಲ್ಲಿ ಬಿಜೆಪಿ ವಿಫಲವಾಗಿದೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ 10 ದಿನಗಳ ಕಾಲ ಬಿಡದಿಯಲ್ಲಿ ಕ್ಯಾಂಪ್ ಮಾಡಿತ್ತು. ಆದರೆ ಕಾಂಗ್ರೆಸ್ ಬೂಟಾಟಿಕೆ ಓಲೈಕೆಗೆ ಜನ ಮರುಳಾಗಲ್ಲ.  ಜೆಡಿಎಸ್ ಧೂಳಿಪಟ ಮಾಡುತ್ತೇವೆ ಎಂದವರಿಗೆ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ಟಾಂಗ್ ನೀಡಿದರು.

ಬಿಡಿದಿಯಲ್ಲೇ ರಾಜಕೀಯ ಜನ್ಮ ಸಿಕ್ಕಿದ್ದು. ನಾವು  18 ರಿಂದ 20 ಸ್ಥಾನ ಗೆಲ್ಲುತ್ತೇವೆ ಅಂದುಕೊಂಡಿದ್ದವು. ಆದರೂ 2023 ಚುನಾವಣಾ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಕಾಂಗ್ರೆಸ್ ಆರೋಪಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ.  ಜನರೇ ಹೋರಾಟ ಮಾಡಿ ಚುನಾವಣೆ ಮಾಡಿದ್ದಾರೆ. ಮುಂದಿನ 1 ವರ್ಷ ಜನರ ಬಳಿ ಹೋಗಿ ಪಕ್ಷ ಸಂಘಟಿಸುವೆ ಎಂದು ಹೆಚ್.ಡಿಕೆ ಹೇಳಿದರು.

Key words: JDS-victory – Bidadi- Municipality-Former CM- HD Kumaraswamy