Wednesday, August 19, 2026

BDA Apartments

Home Front Page ಕರ್ನಾಟಕ ಬಂದ್ ವಿಚಾರ: ಕನ್ನಡ ಸಂಘಟನೆ ಜತೆ ಮಾತುಕತೆಗೆ ಸರ್ಕಾರ ಸಿದ್ಧ- ಸಚಿವ ಅಶ್ವಥ್ ನಾರಾಯಣ್.

ಕರ್ನಾಟಕ ಬಂದ್ ವಿಚಾರ: ಕನ್ನಡ ಸಂಘಟನೆ ಜತೆ ಮಾತುಕತೆಗೆ ಸರ್ಕಾರ ಸಿದ್ಧ- ಸಚಿವ ಅಶ್ವಥ್ ನಾರಾಯಣ್.

ಬೆಂಗಳೂರು,ಡಿಸೆಂಬರ್,25,2021(www.justkannada.in): ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ವಿಚಾರ ಸಂಬಂಧ ಕನ್ನಡಪರ ಸಂಘಟನೆಗಳ ಜತೆ ಮಾತುಕತೆಗೆ ಸರ್ಕಾರ ಸಿದ್ಧ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಕನ್ನಡ ಸಂಘಟನೆ  ಬಂದ್ ಗೆ ಕರೆ ನೀಡಿರೋದು ಸೂಕ್ತ ಅಲ್ಲ  ಬಂದ್ ಮಾಡುವ ಅವಶ್ಯಕತೆ ಇಲ್ಲ.  ಸಿಎಂ ಜೊತೆ ಮಾತನಾಡಿ ಗೌರವಿಸುತ್ತೇವೆ.  ಬಂದ್ ಕರೆ ಕೊಟ್ಟಿದ್ದನ್ನ ಹಿಂಪಡೆಯಿರಿ. ಕನ್ನಡ ಸಂಘಟನೆ ಜತೆ ಮಾತುಕತೆಗೆ ಸರ್ಕಾರ ಸಿದ್ಧ ಎಂದರು.

ಒಮಿಕ್ರಾನ್ ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸಿದ್ದೇವೆ ದೇಶದಲ್ಲೇ ಬಹಳ ಅಡ್ವಾನ್ಸ್ ಆಗಿ ನೀತಿ ರೂಪಿಸಿದ್ದೇವೆ ಈಗ ಏನಿದ್ರೂ ಅವುಗಳನ್ನ ನಿರ್ವಹಣೆ ,ಮಾಡುವುದಷ್ಟೆ ಎಂದು ಸಚಿವ ಅಶ್ವತ್ ನಾರಾಯಣ್ ತಿಳಿಸಿದರು.

Key words: Karnataka Bandh-  Government – Kannada organization-Minister -Ashwath Narayan.