ಚಿತ್ರರಂಗದ ವಿರುದ್ಧ ಆಕ್ರೋಶ: ಯಾವುದೇ ಕಾರಣಕ್ಕೂ ಬಂದ್ ಮುಂದೂಡಲ್ಲ ಎಂದ ವಾಟಾಳ್ ನಾಗರಾಜ್.

ಬೆಂಗಳೂರು,ಡಿಸೆಂಬರ್,25,2021(www.justkannada.in):  ರಾಜ್ಯದಲ್ಲಿ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ನೀಡಿದ್ದು ಈ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಫಿಲಂ ಚೇಂಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಫಿಲಂ ಚೇಂಬರ್ ಎದುರು  ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡಯಿತು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಮುಂದೂಡುವುದಿಲ್ಲ. ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ ನೀಡಲೇಬೇಕು. ನಮಗೆ ಯಾವುದೇ ರೀತಿಯ ನೈತಿಕ ಬೆಂಬಲ ಬೇಡ. ಅವರಿಗೊಸ್ಕರ ಬಂದ್ ದಿನಾಂಕ ಬದಲಿಸಲು ಸಾಧ್ಯವಿಲ್ಲ ಎಂದರು.

ನೈತಿಕ ಬೆಂಬಲ ಎನ್ನುವುದು ಬೋಗಸ್.  ಕನ್ನಡ ಚಿತ್ರರಂಗ ಉಳಿದಿರುವುದು ಕನ್ನಡಿಗರಿಂದ. ಬಸವಣ್ಣ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಎಂಇಎಸ್ ಹಾನಿ ಮಾಡಿದೆ. ಕನ್ನಡಿಗರ ಅವಹೇಳನ ಮಾಢಿದೆ. ಈ ಹೋರಾಟದಲ್ಲಿ ಕನ್ನಡಿಗರ ಪರ ನಿಲ್ಲಬೇಕು. ಬಂದ್ ಬೇಡ ಅನ್ನೋರು ಸಿಎಂ ಅವರನ್ನ ಭೇಟಿ ಮಾಡಲಿ.  ಸಿನಿಮಾದವರೆಲ್ಲಾ ಸಿಎಂ ಬೇಟಿ ಮಾಡಿ ಎಂಇಎಸ್ ಬ್ಯಾನ್ ಮಾಡಿ ಅಂತಾ ಹೇಳಲಿ ಎಂದರು.

Key words: kannada fighter-Vatal Nagaraj -karnataka bandh -not postponed – any reason