Wednesday, September 30, 2026

BDA Apartments

Mysore Dasara Festival BDA JK_Adv BDA Adv
Home Front Page ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ: ಸಚಿವ ಅಶ್ವತ್ ನಾರಾಯಣ್ ಸಂತಸ.

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ: ಸಚಿವ ಅಶ್ವತ್ ನಾರಾಯಣ್ ಸಂತಸ.

ಬೆಳಗಾವಿ,ಡಿಸೆಂಬರ್,14,2021(www.justkannada.in):  ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವುದು ಸಂತಸ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದ್ದು, ಪಕ್ಷದ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ದಾಖಲಿಸುವ ಮೂಲಕ ಚರಿತ್ರೆ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಒಳ್ಳೆಯ ಸಂದೇಶ ರವಾನಿಸಿದ್ದಾರೆ’ ಎಂದು ಅವರು ನುಡಿದರು.

ವಿಧಾನ ಪರಿಷತ್ತಿನಲ್ಲಿ ಈಗ ಬಿಜೆಪಿ ಬಲ ಮೊದಲಿಗಿಂತ ಹೆಚ್ಚಿದೆ. ಇದರಿಂದಾಗಿ ಹೊಸಹೊಸ ಯೋಜನೆ ಮತ್ತು ಕಾಯ್ದೆಗಳನ್ನು ಜಾರಿಗೆ ತರುವುದು ಸುಲಭವಾಗಲಿದೆ. ಜನರ ಇಚ್ಛೆಗೆ ಪೂರಕವಾದ ಆಡಳಿತ ನೀಡಲು ಮತ್ತು ತ್ವರಿತ ಗತಿಯಲ್ಲಿ ಕೆಲಸ ಮಾಡಲು ಇದರಿಂದ ಮತ್ತಷ್ಟು ಬಲ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು.

Key words: Excessive- position – BJP – council elections-Minister -Ashwath Narayan