Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಪಂಜಾಬ್’ನಲ್ಲಿ ಯುವರಾಜ್ ಸಿಂಗ್-ಹರ್ಭಜನ್ ಸಿಂಗ್ ಪಕ್ಷಕ್ಕೆ ಸೆಳೆಯಲು ಬಿಜೆಪಿ ಯತ್ನ

ಪಂಜಾಬ್’ನಲ್ಲಿ ಯುವರಾಜ್ ಸಿಂಗ್-ಹರ್ಭಜನ್ ಸಿಂಗ್ ಪಕ್ಷಕ್ಕೆ ಸೆಳೆಯಲು ಬಿಜೆಪಿ ಯತ್ನ

ಬೆಂಗಳೂರು, ಡಿಸೆಂಬರ್ 12, 12, 2021 (www.justkannada.in): ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ತಯಾರಿ ಆರಂಭಿಸಿದೆ.

ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದ ಮಾಜಿ ಕ್ರಿಕೆಟಿಗರನ್ನು ಬಿಜೆಪಿ ಕೇಳಬಹುದು ಎನ್ನಲಾಗಿದೆ.

ಅವರು ಸ್ಪರ್ಧಿಸಲು ಒಪ್ಪದಿದ್ದರೆ, ಬಿಜೆಪಿ ಪಕ್ಷವು ಪ್ರಚಾರ ಮಾಡಲು ಅವರನ್ನು ಕೇಳಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಈ ಮೂಲಕ ಪಂಜಾಬ್‌ನಲ್ಲಿ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ಸಾರ್ವಜನಿಕ ರಂಗದ ಕೆಲವು ಪ್ರಮುಖ ವ್ಯಕ್ತಿಗಳನ್ನು ಪಕ್ಷಕ್ಕೆ ಸೆಳೆಯಲು ಸಿದ್ಧತೆ ನಡೆಸಿದೆ.