Monday, August 24, 2026

BDA Apartments

Home Front Page ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್  ಬೆಂಗಳೂರಿಗೆ ಶಿಫ್ಟ್

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್  ಬೆಂಗಳೂರಿಗೆ ಶಿಫ್ಟ್

ಬೆಂಗಳೂರು,ಡಿಸೆಂಬರ್,9,2021(www.justkannada.in): ತಮಿಳುನಾಡಿನ ಊಟಿಯ ಕೂನೂರ್ ನಲ್ಲಿ ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ಹೌದು  ಇಂದು ವಿಶೇಷ ಏರ್ ಆಂಬುಲೆನ್ಸ್ ಮೂಲಕ ವರುಣ್ ಸಿಂಗ್ ಅವರನ್ನ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಎಚ್ ಎಎಲ್ ಏರ್ ಪೋರ್ಟ್ ರಸ್ತೆಯಲ್ಲಿರುವ ಕಮಾಂಡೊ ಆಸ್ಪತ್ರೆ ಆಸ್ಪತ್ರೆಗೆ ವರುಣ್ ಸಿಂಗ್ ಅವರನ್ನ ದಾಖಲು ಮಾಡಲಾಗುತ್ತಿದೆ. ಇಂದು ಸಂಜೆ 4ಗಂಟೆ ಸಂದರ್ಭದಲ್ಲಿ ಏರ್ ಆಂಬುಲೆನ್ಸ್ ಮೂಲಕ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದ್ದು ಝಿರೋ ಟ್ರಾಫಿಕ್ ವ್ಯವಸ್ಥೆ ಯಲ್ಲಿ ಕಮಾಂಡೋ ಆಸ್ಪತ್ರೆಗೆ ಕರೆತರಲಾಗಿದೆ.

ಹೆಲಿಕಾಪ್ಟರ್ ಪತನದ ಸಂದರ್ಭದಲ್ಲಿ ಬೆಂಕಿ ತಗುಲಿ ವರುಣ್ ಸಿಂಗ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಹೇಗಾದರೂ ಮಾಡಿ ಬದುಕಿಸಿಕೊಳ್ಳಲು  ಪ್ರಯತ್ನಿಸಲಾಗುತ್ತಿದೆ.

Key words: Army –helicopter- disaster-  Group Captain -Varun Singh, – shifts – Bangalore