Friday, October 16, 2026

Dasara Wishes

Happy Dasara
Home Front Page ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ: ಟೆಸ್ಟಿಂಗ್ ಹೆಚ್ಚಳ ಮಾಡ್ತೇವೆ- ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ.

ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ: ಟೆಸ್ಟಿಂಗ್ ಹೆಚ್ಚಳ ಮಾಡ್ತೇವೆ- ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ.

ಬೆಂಗಳೂರು,ಡಿಸೆಂಬರ್,3,2021(www.justkannada.in):  ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪತ್ತೆ ಹಿನ್ನೆಲೆ ರಾಜ್ಯ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಈ ಮಧ್ಯೆ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ಧಾರೆ.

ಈ ಬಗ್ಗೆ ಮಾತನಾಡಿದ ಗೌರವ್ ಗುಪ್ತ, ರಾಜ್ಯಾದ್ಯಂತ ಒಂದೇ ಮಾರ್ಗಸೂಚಿ ಹೊರಡಿಸಲಾಗಿದೆ. ಅದೇ ಮಾರ್ಗಸೂಚಿ ಬೆಂಗಳೂರಿಗೆ ಅನ್ವಯವಾಗಲಿದೆ. ಬೆಂಗಳೂರಿನಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹೊರದೇಶದಿಂದ ಬಂದವರನ್ನ ಪತ್ತೆ ಮಾಡುತ್ತೇವೆ. ಒಮಿಕ್ರಾನ್ ಸೋಂಕು ತಗುಲಿದವರ ಸಂಪರ್ಕಿತರ ಪತ್ತೆ ಮಾಡುತ್ತಿದ್ದೇವೆ. ಈವರೆಗೆ 200 ಸಂಪರ್ಕಿತರನ್ನ ಪತ್ತೆ ಮಾಡಿದ್ದೇವೆ ಎಂದರು.

ಹಾಗೆಯೇ ಕಡ್ಡಾಯವಾಗಿ ಟೆಸ್ಟಿಂಗ್,  ಲಸಿಕೆ ನೀಡುತ್ತೇವೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಗೌರವ್ ಗುಪ್ತ ತಿಳಿಸಿದರು.

Key words: Bangalore- not – separate – Guide Lines-BBMP -Chief Commissioner- Gaurav Gupta.