Friday, August 14, 2026

BDA Apartments

Home Crime ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ: ಪ್ರಕರಣ ದಾಖಲು.

ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ: ಪ್ರಕರಣ ದಾಖಲು.

ಬೆಂಗಳೂರು,ಡಿಸಂಬರ್,1,2021(www.justkannada.in):  ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆಗಿದ ವಿಡಿಯೋ ವೈರಲ್ ಆದ ಪ್ರಕರಣ ಸಂಬಂಧ ಇದೀಗ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಎಸ್.ಆರ್ ವಿಶ್ವನಾಥ್ ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ. ಶಾಸಕ ಎಸ್ ಆರ್ ವಿಶ್ವನಾಥ್  ಅವರ ಹತ್ಯೆಗೆ ಸ್ಕೆಚ್ ಹಾಕಿರೋ ವೀಡಿಯೋ ಈಗ ಬಹಿರಂಗವಾಗಿದ್ದು, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರ ನಿವಾಸದಲ್ಲಿ ನಡೆದಿರುವಂತ ಮಾತುಕತೆ ವೀಡಿಯೋ ಇದಾಗಿದೆ, ಈ ವೀಡಿಯೋದಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರು ಕುಳ್ಳದೇವರಾಜ್ ಎಂಬುವರೊಂದಿಗೆ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹತ್ಯೆ ಕುರಿತಂತೆ ಮಾತನಾಡುತ್ತಿರುವ ದೃಶ್ಯಾವಳಿಯಿದೆ.

ವೀಡಿಯೋದಲ್ಲಿ ಗೋಪಾಲಕೃಷ್ಣ ಅವರು ದೇವರಾಜ್ ಎನ್ನುವವರ ಜೊತೆಗೆ ಮಾತುಕತೆ ನಡೆದಿರೋದು ಕಂಡು ಬಂದಿದ್ದು,  ನಾನು ನೀನು ಇಬ್ಬರೇ ಸೇರಿಕೊಂಡು ಕೆಲಸ ಮಾಡೋಣ. ಆತನನ್ನ ಹತ್ಯೆ ಮಾಡಿದರೇ ಸುಲಭವಾಗಿ ಗೆಲ್ಲಬಹುದು. ಈ ವಿಷಯ ಯಾರಿಗೂ ಗೊತ್ತಾಗಬಾರದು. ಏನಾದ್ರೂ ಸರಿ ಫಿನಿಶ್ ಆಗಬೇಕು ಎಂದು ಮಾತನಾಡಿದ್ದಾರೆ. ಕಳೆದ 5 ತಿಂಗಳ ಹಿಂದೆ ಹತ್ಯೆಗೆ ಈ ಸ್ಕೆಚ್ ಹಾಕಿರುವ ವೀಡಿಯೋ ಇದಾಗಿದೆ ಎನ್ನಲಾಗುತ್ತಿದೆ.

Key words: Sketch – murder –MLA- SR Viswanath-Case -file