Thursday, August 6, 2026

BDA Apartments

Home Front Page ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿದ ಸಂಸದ ಪ್ರತಾಪ್ ಸಿಂಹ‌ಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು.

ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿದ ಸಂಸದ ಪ್ರತಾಪ್ ಸಿಂಹ‌ಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು.

ಮೈಸೂರು,ನವೆಂಬರ್,15,2021(www.justkannada.in): ಪ್ರಿಯಾಂಕಾ ಖರ್ಗೆ ಹೆಸರು ಗಂಡೊ‌ಹೆಣ್ಣೋ ಗೊತ್ತೇ ಆಗಲ್ಲ ಎಂದು ವ್ಯಂಗ್ಯವಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಪ್ರತಾಪ್ ಸಿಂಹರಿಗೆ ಧೈರ್ಯ ಇದ್ದರೆ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಇವರು ಸತ್ಯ ಸಂತರು ಪ್ರಾಮಾಣಿಕರಾಗಿದ್ರೆ ಉತ್ತರ ಕೊಡಲಿ. ಸರ್ಕಾರಕ್ಕೆ ಧೈರ್ಯ ಇದ್ದರೆ ಬಿಟ್ ಕಾಯಿನ್ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಲಿ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಸವಾಲು ಹಾಕಿದರು.

ಪ್ರಿಯಾಂಕ ಖರ್ಗೆ ವಿರುದ್ಧ ಪ್ರತಾಪ್ ಸಿಂಹ‌ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ಧರಾಮಯ್ಯ, ಬಿಜೆಪಿಯವರು ಯಾವಾಗಲು ವೈಯುಕ್ತಿಕ ಟೀಕೆ‌ ಮಾಡುತ್ತಾರೆ. ಇದು ಅವರು ಹಳೆ ಚಾಳಿ. ಇತ್ತೀಚೆಗೆ ಅವರ ನಾಯಕರು ಮಾಡುವುದನ್ನು ಕಾರ್ಯಕರ್ತರು ಫಾಲೋ ಮಾಡ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

Key words: MLA -Yatindra Siddaramaiah –MP- Pratap Simha- mysore