Thursday, August 6, 2026

BDA Apartments

Home Front Page ಪೋಲಾಗುತ್ತಿದ್ದ ನೀರಿನ ಕುರಿತು ಸುದ್ಧಿ ಮಾಡಿದ್ದಕ್ಕೆ ವರದಿಗಾರನ ಮೇಲೆ ಹಲ್ಲೆ.

ಪೋಲಾಗುತ್ತಿದ್ದ ನೀರಿನ ಕುರಿತು ಸುದ್ಧಿ ಮಾಡಿದ್ದಕ್ಕೆ ವರದಿಗಾರನ ಮೇಲೆ ಹಲ್ಲೆ.

ತುಮಕೂರು,ನವೆಂಬರ್,15,2021(www.justkannada.in):  ಪೋಲಾಗುತ್ತಿದ್ದ ನೀರಿನ ಕುರಿತು ಸುದ್ದಿ ಮಾಡಿದ ತುಮಕೂರು ಮಿತ್ರ ದಿನಪತ್ರಿಕೆ ತಾಲ್ಲೂಕು ವರದಿಗಾರನ ಮೇಲೆ ಹಲ್ಲೆ ಮಾಡಲಾಗಿದೆ.

ವರದಿಗಾರ ರಮೇಶ್ ಗೌಡರ ಮೇಲೆ ನೆನ್ನೆ ಹಲ್ಲೆ ನಡೆದಿದ್ದು, ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ರಮೇಶ್ ಗೌಡ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ರಂಗರಾಜು, ನಿರ್ದೇಶಕ ರಂಗನಾಥ್, ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ರಮೇಶ್ ಗೌಡರ ಆರೋಗ್ಯ ವಿಚಾರಿಸಿ ಆರೋಪಿಗಳನ್ನು ಕೂಡಲೇ ಬಂಧಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುವ ಭರವಸೆ ನೀಡಿದರು.

Key words: tumakur- Attack – reporter – breaking news -water