Wednesday, August 19, 2026

BDA Apartments

Home Front Page ಮೈಸೂರು: ಮಳೆ ನಡುವೆ 1ಕೀ.ಮೀ ನಡೆದು ಆಂಬ್ಯುಲೆನ್ಸ್ ಏರಿದ ಗರ್ಭಿಣಿ

ಮೈಸೂರು: ಮಳೆ ನಡುವೆ 1ಕೀ.ಮೀ ನಡೆದು ಆಂಬ್ಯುಲೆನ್ಸ್ ಏರಿದ ಗರ್ಭಿಣಿ

ಮೈಸೂರು, ನವೆಂಬರ್ 7, 2021: ಮಳೆಯ ನಡುವೆಯೂ
ಹೆರಿಗೆ ನೋವಿನಲ್ಲಿ 1 ಕಿ‌.ಮೀ ನಡೆದು ನಂತರ ಗರ್ಭಿಣಿ ಆಂಬ್ಯುಲೆನ್ಸ್ ಏರಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೋಕಿನ ಬೊಮ್ಮಲಾಪುರ ಹಾಡಿಯ ಗರ್ಭಿಣಿ ರಂಜಿತ ಆ ಮಹಿಳೆ.

ಹಾಡಿಗಳಲ್ಲಿನ ಮೂಲ ಸೌಕರ್ಯದ ಕೊರೆತೆಗೆ ಇದು ಕೈಗನ್ನಡಿಯಾಗಿದೆ. ಎಚ್.ಡಿ.ಕೋಟೆ ತಾಲೋಕಿನ ಬೊಮ್ಮಲಾಪುರ ಹಾಡಿಗೆ ಸಂಪರ್ಕ ರಸ್ತೆಯೇ ಇಲ್ಲ. ಹೀಗಾಗಿ ಮಹಿಳೆ ೧ ಕಿಮೀ ಮಳೆ ನಡುವೆ ನಡೆದೇ ಬರಬೇಕಾಯಿತು.

ನಾಗರಹೊಳೆ ವನ್ಯಜೀವಿ ಅರಣ್ಯದಲ್ಲಿರುವ ಹಾಡಿಯಲ್ಲಿ ಈ ಘಟನೆ ನಡೆದಿದ್ದು, ಲ ತಡವಾಗಿ ಬೆಳಕಿಗೆ.
ಗರ್ಭಿಣಿ ಸಂಕಷ್ಟಕ್ಕೆ ಆಶಾ ಕಾರ್ಯಕರ್ತೆ ಹಾಗೂ ಹಾಡಿಯ ಮಂದಿ ಬಂದಿದ್ದಾರೆ.
ಜಿನುಗುತ್ತಿರುವ ಮಳೆಯಲ್ಲಿ ಛತ್ರಿ ಆಸರೆಯೊಂದಿಗೆ ಆಂಬ್ಯಲೆನ್ಸ್ ಏರಲು ಸಹಾಯ ಮಾಡಿದ್ದಾರೆ.

ಬಳಿಕ ಸುರಕ್ಷಿತವಾಗಿ ಸರಗೂರು ತಾಲೋಕಿನ ವಿವೇಕಾನಂದ ಆಸ್ಪತ್ರೆಯಲ್ಲಿ ದಾಖಲು‌ ಮಾಡಲಾಗಿತ್ತು. ಗಂಡು ಮಗುವಿಗೆ ಜನ್ಮನೀಡಿದ್ದಾರೆ‌. ಹಾಡಿ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ತಡೆಯೆ ಕಾರಣ ಎನ್ನಲಾಗಿದೆ.