Thursday, September 10, 2026

BDA Apartments

Home Front Page ನಾನೇ ಮಾಡಿದ್ದು ಎಂದು ಬೀಗುವಾಗ 10 ಬಾರಿ ಯೋಚಿಸಿ-ಸಿದ್ಧರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟಾಂಗ್.

ನಾನೇ ಮಾಡಿದ್ದು ಎಂದು ಬೀಗುವಾಗ 10 ಬಾರಿ ಯೋಚಿಸಿ-ಸಿದ್ಧರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟಾಂಗ್.

ಬೆಂಗಳೂರು,ನವೆಂಬರ್,4,2021(www.justkannada.in):  ಅಹಿಂದ ನಾಯಕನೆಂದು ಅಧಿಕಾರಕ್ಕೆ ಬಂದ ಮೇಲೆ ದಲಿತರ ಪರ ಕೆಲಸ ಮಾಡುವುದು ನಿಮ್ಮ ಕರ್ತವ್ಯ.ಅದರಲ್ಲಿ ನೀವು ಹೆಚ್ಚುಗಾರಿಕೆ ಮೆರೆಯುವ ಅಗತ್ಯವಿಲ್ಲ. ನಾನೇ ಮಾಡಿದ್ದು ಎಂದು ಬೀಗುವಾಗ 10 ಬಾರಿ ಯೋಚಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸಿದ್ದರಾಮಯ್ಯನವರೇ ದಲಿತ ಪರ ಕಾಳಜಿ ಮೆರೆದಿದ್ದೀರಲ್ಲವೇ? ಹಾಗಾದ್ರೆ ದಲಿತ ನಾಯಕ ಪರಮೇಶ್ವರ್‌ರನ್ನ ಸೋಲಿಸಿದ್ಯಾರು? ಸಿಎಂ ಆಗುವುದಕ್ಕೆ ಅಡ್ಡಿಯಾಗ್ತಾರೆಂದು ನೀವೇ ಸೋಲಿಸಿಲ್ಲವೇ? ಸತ್ಯದರ್ಶನ ಮಾಡಿಸುವಿರಾ ಸಿದ್ದರಾಮಯ್ಯನವರೇ? ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಹೊಟ್ಟೆಪಾಡಿಗಾಗಿಯೇ? ಖರ್ಗೆರನ್ನು ದೆಹಲಿಗೆ ಸಾಗಹಾಕಿದ್ದು ಹೊಟ್ಟೆಪಾಡಿಗಾಗಿಯೇ? ಎಂದು ತಿರುಗೇಟು ನೀಡಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದಲಿತರನ್ನು ಸಿಎಂ ಮಾಡುವೆ. ನಾನೇ ಮುಂದೆ ನಿಂತು ದಲಿತರನ್ನು ಸಿಎಂ ಮಾಡುತ್ತೇನೆ ಅನ್ನಿ. ಆಗ ನಿಮ್ಮ ದಲಿತ ಪ್ರೇಮ ಒಪ್ಪಿಕೊಳ್ಳೋಣ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯಗೆ ದಲಿತರು ಅಂದ್ರೆ ಕೇವಲ ವೋಟ್‌ ಬ್ಯಾಂಕ್. ಹೀಗಾಗಿಯೇ ದಲಿತರ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎನ್ನುತ್ತಾರೆ. ಆಂತರ್ಯದಲ್ಲಿ ದಲಿತ ನಾಯಕರನ್ನ ತುಳಿದು ಅಧಿಕಾರಕ್ಕೇರ್ತಾರೆ ಎಂದು ಸಿದ್ಧರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

Key words: Think -10 times -State –BJP- unit –former CM-Siddaramaiah