Sunday, August 23, 2026

BDA Apartments

Home Front Page ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ಬಿಎಸ್ ವೈಗೆ ರಾಜ್ಯಪಾಲರಿಂದ ಸೂಚನೆ…

ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ಬಿಎಸ್ ವೈಗೆ ರಾಜ್ಯಪಾಲರಿಂದ ಸೂಚನೆ…

ಬೆಂಗಳೂರು,ಜು,26,2019(www.justkannna.in); ಸರ್ಕಾರರಚನೆಗೆ ಹಕ್ಕು ಮಂಡಿಸಿ ಬಳಿಕ ಸಿಎಂ ಆಗಿ ಪ್ರಮಾಣ  ಸ್ವೀಕರಿಸಲು ಅನುಮತಿ ಕೋರಿದ ಬಿಎಸ್ ಯಡಿಯೂರಪ್ಪಗೆ ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಸೂಚಿಸಿದ್ದಾರೆ.

ಇಂದು ಬಿಎಸ್ ಯಡಿಯೂರಪ್ಪ ರಾಜ್ಯಪಾಲರನ್ನ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಂತರ ಸರ್ಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ಒಂದು ವಾರದೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಬಿಎಸ್. ಯಡಿಯೂರಪ್ಪ, ಇಂದು ಸಂಜೆ 6ರಿಂದ 6.15ರೊಳಗೆ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಯಾರ್ಯಾರು ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದನ್ನ ಅಮಿತ್ ಶಾ ಅವರು ನಿರ್ಧರಿಸುತ್ತಾರೆ. ಅವರ ಜತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ ಎಂದರು.

ಹಾಗೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಮ್ಮ ಶಾಸಕರು ಎಂಎಲ್ ಸಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ಅವರನ್ನ ಆಹ್ವಾನಿಸುತ್ತೇನೆ ಎಂದರು.

Key words: Instructions – Governor – BS Yeddyurappa- proved – majority -within – week.