Thursday, August 6, 2026

BDA Apartments

Home Cinema ಅಪ್ಪುಗೆ ಘನತೆಯ ವಿದಾಯ: ಅಭಿಮಾನಿ ದೇವರುಗಳಿಗೆ ಧನ್ಯವಾದ ಹೇಳಿದ ರಾಘಣ್ಣ

ಅಪ್ಪುಗೆ ಘನತೆಯ ವಿದಾಯ: ಅಭಿಮಾನಿ ದೇವರುಗಳಿಗೆ ಧನ್ಯವಾದ ಹೇಳಿದ ರಾಘಣ್ಣ

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರವನ್ನು ಶಾಂತಿಯುತವಾಗಿ ನಡೆಸಿಕೊಟ್ಟ ನಾಡಿನ ಜನತೆ ಹಾಗೂ ಅಭಿಮಾನಿಗಳಿಗೆ ರಾಘವೇಂದ್ರ ರಾಜ್ ಕುಮಾರ್ ಧನ್ಯವಾದ ಸಲ್ಲಿಸಿದರು.

ಅಂತ್ಯಸಂಸ್ಕಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತವಾಗಿ ಅಪ್ಪುಗೆ ಘನತೆಯ ವಿದಾಯವನ್ನು ಸರಕಾರ, ಜನತೆ ನೀಡಿದ್ದಾರೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಅಪ್ಪನ ಅಂತ್ಯ ಸಂಸ್ಕಾರದ ವೇಳೆ ಕುಟುಂಬದವರೇ ಪಾಲ್ಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಯಾವ ಅಚಾತುರ್ಯಕ್ಕೂ ಅವಕಾಶ ನೀಡದಂತೆ ಘನತೆ ವಿದಾಯ ನೀಡಿರುವುದಕ್ಕೆ ರಾಘಣ್ಣ ಧನ್ಯವಾದ ತಿಳಿಸಿದರು.