Tuesday, August 18, 2026

BDA Apartments

Home Crime ಯುವಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್.

ಯುವಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್.

ಮೈಸೂರು,ಅಕ್ಟೋಬರ್,11,2021(www.justkannada.in):  ಮೈಸೂರಿನ ಗುಂಡುರಾವ್‌ ನಗರದಲ್ಲಿ ಯುವಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರಂ ಠಾಣಾ ಪೊಲೀಸರು  ಪ್ರಕರಣವನ್ನ ಬೇಧಿಸಿದ್ದು, ನಾಳ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ನಿನ್ನೆ ರಾತ್ರಿಯೇ ಆರೋಪಿಗಳನ್ನ ಬೇಟೆಯಾಡಿರುವ ಪೊಲೀಸರು, ಉಳಿದ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  ನಂದಕಿಶೋರ್ ಎಂಬ ಯುವಕನನ್ನ ಕೊಲೆ ಮಾಡಿ ಯುವಕರ ಗುಂಪು ಪರಾರಿಯಾಗಿತ್ತು.  ಯುವಕರ ಗುಂಪಿನಲ್ಲಿದ್ದ ನಾಲ್ವರನ್ನ ಬಂಧಿಸಲಾಗಿದೆ.

ನಿನ್ನೆ ಸಂಜೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು  ಇಬ್ಬರು ಯುವಕರ ಮೇಲೆ ಎಂಟು ಮಂದಿ ಯುವಕರ ಗುಂಪು ಹಲ್ಲೆ ಮಾಡಿತ್ತು. ಈ ಹೊಡೆದಾಟದಲ್ಲಿ ನಂದಕಿಶೋರ್ ಕೊಲೆಯಾಗಿತ್ತು. ಸಂಜಯ್ ಎಂಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Key words:  murder – young man-mysore-four -accused – Arrest