Friday, August 21, 2026

BDA Apartments

Home Cinema ಅಕ್ಟೋಬರ್‌ 2ರಂದು ‘ಶ್ರೀಕೃಷ್ಣ@ gmail.com’ ಟ್ರೈಲರ್ ರಿಲೀಸ್

ಅಕ್ಟೋಬರ್‌ 2ರಂದು ‘ಶ್ರೀಕೃಷ್ಣ@ gmail.com’ ಟ್ರೈಲರ್ ರಿಲೀಸ್

ಬೆಂಗಳೂರು. ಸೆಪ್ಟೆಂಬರ್ 29, 2021 (www.justkannada.in): ಡಾರ್ಲಿಂಗ್ ಕೃಷ್ಣ ನಟನೆಯ ಬಹು ನಿರೀಕ್ಷೆಯ ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿದೆ.

ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ದಿನದಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ 11 ಗಂಟೆಗೆ ರಿಲೀಸ್ ಆಗಲಿದೆ.

ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಭಾವನಾ ನಟಿಸಿದ್ದಾರೆ. ಅಕ್ಟೋಬರ್‌ 14ರಂದು ಚಿತ್ರ ಬಿಡುಗಡೆಯಾಗಲಿದ್ದು, ಈ ಕುರಿತು ಚಿತ್ರ ತಂಡ ಈಗಾಗಲೇ ಮಾಹಿತಿ ನೀಡಿದೆ.

ಅಂದಹಾಗೆ ಸಂದೇಶ್ ನಾಗರಾಜ್ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಗಶೇಖರ್ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ.

key words: ‘Srikrishna @ gmail.com’ Trailer Release on October 2nd