Friday, August 14, 2026

BDA Apartments

Home Cinema ನೆಚ್ಚಿನ ಅಭಿಮಾನಿ, ಕಾರು ಚಾಲಕನಿಗೆ ಬರ್ತ್ ಡೇ ವಿಶ್ ಮಾಡಿದ ಕಿಚ್ಚ

ನೆಚ್ಚಿನ ಅಭಿಮಾನಿ, ಕಾರು ಚಾಲಕನಿಗೆ ಬರ್ತ್ ಡೇ ವಿಶ್ ಮಾಡಿದ ಕಿಚ್ಚ

ಬೆಂಗಳೂರು, ಜುಲೈ 23, 2019 (www.justkannada.in): ಕಿಚ್ಚ ಸುದೀಪ್ ತಮ್ಮ ಪ್ರೀತಿ ಪಾತ್ರರ ಜನ್ಮದಿನಕ್ಕೆ ಟ್ವಿಟರ್ ಖಾತೆಯ ಮೂಲಕ ವಿಶ್ ಮಾಡುತ್ತಾರೆ. ಈ ಬಾರಿ ತಮ್ಮ ಕಾರು ಚಾಲಕನ ಬಗ್ಗೆ ಸುದೀಪ್ ಹೇಳಿಕೊಂಡಿದ್ದಾರೆ.

ವರ್ಷಗಳ ಹಿಂದೆ ತನ್ನ ಅಭಿಮಾನಿಯಾಗಿ ಬಂದು ಈಗ ಕುಟುಂಬ ಸದಸ್ಯನಂತೇ ಆಗಿರುವ ಕಾರು ಚಾಲಕನ ಬರ್ತ್ ಡೇಗೆ ಕಿಚ್ಚ ಪ್ರೀತಿಯಂದ ಶುಭ ಹಾರೈಸಿದ್ದಾರೆ.

‘ನನ್ನ ಮನೆಯ ಹೊರಗೆ ಗಂಟೆಗಳ ಕಾಲ ಒಬ್ಬ ಅಭಿಮಾನಿಯಾಗಿ ನನ್ನನ್ನು ಕಾಣಲು ನಿಂತಿದ್ದೆ. ಈಗ ನಮ್ಮ ಕಾರು ಚಾಲಕನಾಗಿ ಮನೆಯ ಸದಸ್ಯನಂತೇ ಆಗಿರುವೆ.

ನಮ್ಮ ಬಗ್ಗೆ ಕಾಳಜಿ ವಹಿಸುವೆ. ಸಹೋದರನಂತಿರುವೆ. ನಿನಗೆ ಹುಟ್ಟುಹಬ್ಬದ ಶುಭಾಷಯಗಳು’ ಎಂದು ಕಿಚ್ಚ ಶುಭ ಕೋರಿದ್ದಾರೆ.