ಬಾಲಿವುಡ್’ನಲ್ಲಿ ಆ್ಯಕ್ಟನ್ ಕಟ್ ಹೇಳಲು ಲೂಸಿಯಾ ಪವನ್ ಸಿದ್ಧತೆ

ಬೆಂಗಳೂರು, ಜುಲೈ 23, 2019 (www.justkannada.in): ನಟ, ನಿರ್ದೇಶಕ ಪವನ್ ಕುಮಾರ್ ಹಿಂದಿ ಚಲನಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾರೆ.

ಹೌದು. ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲು ಪವನ್ ಕುಮಾರ್ ಮುಂದಾಗಿದ್ದಾರೆ. “ಲೈಫು ಇಷ್ಟೇನೆ” ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದ ನಿರ್ದೇಶಕ “ಲೂಸಿಯಾ” ಮೂಲಕ ಜನಮೆಚ್ಚುಗೆಗೆ ಗಳಿಸಿದ್ದರು.

ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆ ಪವನ್ ಸಂಪರ್ಕದಲ್ಲಿದ್ದಾರೆ. ಬಾಲಿವುಡ್ ನ ದೊಡ್ಡ ನಾಯಕನ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪವನ್ ಪ್ರಸ್ತುತ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಿರ್ದೇಶಕ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಿದ್ದಾರೆ. ಈ ವರ್ಷಾಂತ್ಯದಲ್ಲಿ ಅಥವಾ 2020 ರ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ.