Thursday, August 13, 2026

BDA Apartments

Home Front Page ಪೌರಕಾರ್ಮಿಕರಿಗೆ ಗ್ಲೌಸ್  ಬೂಟು ವಿತರಣೆ ಬಗ್ಗೆ ಸುಳ್ಳು ಆರೋಪ: ಬೇಲೂರು ಗ್ರಾ.ಪಂ ಪಿಡಿಓ ಸ್ಪಷ್ಟನೆ.

ಪೌರಕಾರ್ಮಿಕರಿಗೆ ಗ್ಲೌಸ್  ಬೂಟು ವಿತರಣೆ ಬಗ್ಗೆ ಸುಳ್ಳು ಆರೋಪ: ಬೇಲೂರು ಗ್ರಾ.ಪಂ ಪಿಡಿಓ ಸ್ಪಷ್ಟನೆ.

ಮಂಡ್ಯ,ಸೆಪ್ಟಂಬರ್,25,2021(www.justkannada.in): ಮಂಡ್ಯ ಜಿಲ್ಲೆಯ ಬೇಲೂರು ಗ್ರಾಮಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸುರೇಶ್ ವಿರುದ್ಧ ಪೌರಕಾರ್ಮಿಕರಿಗೆ ಗ್ಲೌಸ್  ಬೂಟು ವಿತರಣೆ ಮಾಡದ ಆರೋಪ ಕೇಳಿ ಬಂದಿದೆ.

ಆದರೆ ಈ ಆರೋಪವನ್ನ ತಳ್ಳಿ ಹಾಕಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬೇಲೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸುರೇಶ್ , ಮಂಡ್ಯ ಜಿಲ್ಲೆ ಬೇಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಗ್ಲೌಸ್ ಹಗೂ ಬೂಟುಗಳನ್ನ ನೀಡಿಲ್ಲವೆಂಬ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಎಲ್ಲರಿಗೂ ಸ್ವಚ್ಛತಾ ಪರಿಕರಗಳನ್ನು ಈಗಾಗಲೇ ಒದಗಿಸಿದ್ದು ಈ ಪರಿಕರಗಳನ್ನು ಬಳಸದೆ ಸ್ವಚ್ಛತಾ ಕಾರ್ಯ ಮಾಡಿದವರ ವಿರುದ್ಧ ಗ್ರಾಮಪಂಚಾಯಿತಿ ವತಿಯಿಂದ ಕ್ರಮ ಜರುಗಿಸಲಾಗುವುದು.

ಬೇಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದು ಕೆಲವು ಕಿಡಿಗೇಡಿಗಳು ಉದ್ಧೇಶಪೂರ್ವಕವಾಗಿ ಇಂತಹ ಸುಳ್ಳು ಸುದ್ಧಿಗಳನ್ನ ಹಬ್ಬಿಸುತ್ತಿದ್ದಾರೆ ಇದಕ್ಕೆ ಯಾರು ಕಿವಿಗೊಡಬಾರದು. ಸುಳ್ಳುಸುದ್ಧಿ ಹಬ್ಬಿಸಿದವರ ವಿರುದ್ಧ ದೂರು ನೀಡಲಾಗುವುದು ಎಂದು ಬೇಲೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸುರೇಶ್ ಸ್ಪಷ್ಟಪಡಿಸಿದ್ದಾರೆ.

Key words: False accusation -glossy -shoes -distribution -PDO