ಈ ಬಾರಿ ಮೈಸೂರು ಅಧಿ ದೇವತೆ ಚಾಮುಂಡೇಶ್ವರಿ ದೇಗುಲದ ಭಕ್ತರ ಹುಂಡಿ ಹಣದಲ್ಲಿ ಇಳಿಕೆ..

ಮೈಸುರು,ಸೆಪ್ಟಂಬರ್,25,2021(www.justkannada.in):  ಮೈಸೂರಿನ ಅಧಿ ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಹಣ ಎಣಿಕೆ ಕಾರ್ಯ ನಡೆದಿದ್ದು ಈ ಭಾರಿ ಭಕ್ತರ ಹುಂಡಿ ಹಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ 82,16,754 ರೂ ಸಂಗ್ರಹವಾಗಿದೆ. ಈ ಹುಂಡಿ ಹಣದಲ್ಲಿ 2 ಸಾವಿರ ಮುಖ ಬೆಲೆಯ 81 ನೋಟುಗಳು. ಐನೂರು ಮುಖ ಬೆಲೆಯ 6754 ನೋಟುಗಳು. ಇನ್ನೂರು ಮುಖಬೆಲೆಯ 2291  ನೋಟುಗಳು. ನೂರು ರೂ ಮುಖಬೆಲೆಯ 26,048 ನೋಟುಗಳು, ನಾಣ್ಯಗಳು ಸೇರಿದಂತೆ ಒಟ್ಟು 82,16,754 ರೂ ಸಂಗ್ರಹವಾಗಿದೆ.mysore-chamundi-hills-temple-income-crore

ಪ್ರತಿ ಬಾರಿ ತಾಯಿ ಚಾಮುಂಡೇಶ್ವರಿ ದೇಗುಲದ ಭಕ್ತರ ಹುಂಡಿ ಹಣ ಕೋಟಿ ದಾಟುತ್ತಿತ್ತು. ಆದರೆ ಈಗ ಇಳಿಕೆ ಕಂಡಿದೆ.

Key words: mysiore -Chamundeshwari Temple- money-counting