ಮಹದೇವಮ್ಮ ದೇವಾಲಯ ಪುನರ್ ನಿರ್ಮಾಣಕ್ಕೆ ತೀರ್ಮಾನ: ಶಂಕುಸ್ಥಾಪನೆಗೆ ಸಿಎಂ ಬೊಮ್ಮಾಯಿ.

ಮೈಸೂರು,ಸೆಪ್ಟಂಬರ್, 20,2021(www.justkannada.in):   ಅನಧಿಕೃತ ನಿರ್ಮಾಣ ಎಂದು ತೆರವುಗೊಳಿಸಲಾಗಿದ್ದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ  ಮಹದೇವಮ್ಮ ದೇವಾಲಯವನ್ನು ಪುನರ್ ನಿರ್ಮಿಸಲು ನಿರ್ಧರಿಸಲಾಗಿದೆ.

ಮಹದೇವಮ್ಮ ದೇವಾಲಯವನ್ನ ಅಧಿಕಾರಿಗಳು ತೆರವು ಮಾಡುತ್ತಿದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ದೇವಾಲಯವನ್ನ ಪುನರ್ ನಿರ್ಮಿಸಲು ತೀರ್ಮಾನಿಸಲಾಗಿದ್ದು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ದೇವಾಲಯ ಪುನರ್ ನಿರ್ಮಾಣ ಶಂಕುಸ್ಥಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೂಲ ಸ್ಥಳದ ಸ್ವಲ್ಪ ದೂರದಲ್ಲೇ ಮತ್ತೆ ದೇವಾಲಯ ನಿರ್ಮಾಣ ಮಾಡಲಾಗುತ್ತದೆ  ದೇವಾಲಯ ಸಂರಕ್ಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕಾರ್ಯಕಾರಿಣಿ ವೇಳೆ ಸಿಎಂ ಬೊಮ್ಮಾಯಿ ಅವರನ್ನ ಸಂಸದ ಪ್ರತಾಪ್ ಸಿಂಹ ಅನೌಪಚಾರಿಕ ಭೇಟಿ ಮಾಡಿ ದೇವಾಲಯದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾನೂನಾತ್ಮಕವಾಗಿ ದೇವಾಲಯ ಉಳಿವಿಗೆ ಸಿಎಂ  ಬೊಮ್ಮಾಯಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಅಧಿಕಾರಿಗಳ ಅಜ್ಞಾನದಿಂದ ಉಂಟಾಗಿದ್ದ ಆತಂಕ ನಿವಾರಣೆ ಎಂದು  ಸಂಸದ ಪ್ರತಾಪ್ ಸಿಂಹ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Decision – rebuild-nanjanagudu taluk- Mahadevamma temple-CM Bommai – Prathap simha