Wednesday, July 29, 2026

BDA Apartments

Home Cinema ವಿನೋದ್ ರಾಜ್ ಕಡೆಗಣನೆ: ಟ್ವಿಟ್ಟರ್’ನಲ್ಲಿ ನಟ ಜಗ್ಗೇಶ್ ಬೇಸರ

ವಿನೋದ್ ರಾಜ್ ಕಡೆಗಣನೆ: ಟ್ವಿಟ್ಟರ್’ನಲ್ಲಿ ನಟ ಜಗ್ಗೇಶ್ ಬೇಸರ

ಬೆಂಗಳೂರು, ಜುಲೈ 22, 2019 (www.justkannada.in): ನಟ ವಿನೋದ್ ರಾಜ್ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ನಟ ವಿನೋದ್ ರಾಜ್ ಒಳ್ಳೆಯ ಡ್ಯಾನ್ಸರ್ ಆದರೆ, ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡದ ಬಹುತೇಕ ಎಲ್ಲ ಮನರಂಜನೆ ವಾಹಿನಿಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮ ಇರುತ್ತದೆ.

ಅಂತಹ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕುಳಿತ ಕೆಲವರಿಗೆ ಡ್ಯಾನ್ಸ್ ಬರುವುದಿಲ್ಲ. ಅಂತಹ ತೀರ್ಪುಗಾರರಿಗೆ ಸ್ಥಾನ ನೀಡುವ ಬದಲು ವಿನೋದ್ ರಾಜ್ ರಿಗೆ ಅವಕಾಶ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.