Sunday, September 20, 2026

BDA Apartments

ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಗೆ ಬಂದ ಆ ಬಾಲ ಗಣಪ ಯಾರು ?! BDA JK_Adv B...
Home Front Page ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಗೆ ಬಂದ ಆ ಬಾಲ ಗಣಪ ಯಾರು...

ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಗೆ ಬಂದ ಆ ಬಾಲ ಗಣಪ ಯಾರು ?!

ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಗೆ ಬಂದ ಆ ಬಾಲ ಗಣಪ ಯಾರು ?!

ಇಂತಹದೊಂದು ಪ್ರಶ್ನೆ ಈ ಕೆಳಗಿನ ಫೋಟೋ ನೋಡಿದರೆ ಮೂಡುತ್ತದೆ.

ಅಂದಹಾಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಸಾರ ಸಮೇತ ಬಿಡದಿ ತೋಟದ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ.

ತೋಟದ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಕುಟುಂಬ ಸಮೇತ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಂದಹಾಗೆ ಗಣೇಶ ವೇಷಧಾರಿ ಬಾಲಕನೋರ್ವ ಕುಮಾರಸ್ವಾಮಿ ಮನೆಗೆ ಆಗಮಿಸಿದ್ದು ವಿಶೇಷವಾಗಿತ್ತು.

ಬಾಲ ಗಣೇಶ ವೇಷಧಾರಿ ಜತೆ ಕುಳಿತು ಎಚ್ಡಿಕೆ ಕೆಲಕಾಲ ಮಾತುಕತೆ ನಡೆಸಿದರು. ಈ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

key words: hd kumaraswamy celebrate ganesha festival at his farm house near bidadi