Friday, August 21, 2026

BDA Apartments

Home Uncategorized ಪಶ್ಚಿಮ ಬಂಗಾಳ: ಇಂದು ಉಪ ಚುನಾವಣಾ ಕಣಕ್ಕೆಧುಮುಕಲಿದ್ದಾರೆ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ: ಇಂದು ಉಪ ಚುನಾವಣಾ ಕಣಕ್ಕೆಧುಮುಕಲಿದ್ದಾರೆ ಸಿಎಂ ಮಮತಾ ಬ್ಯಾನರ್ಜಿ

ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಉಪ ಚುನಾವಣೆ ಕಣಕ್ಕಿಳಿಯಲಿದ್ದಾರೆ.

ಹೌದು. ಮಮತಾ ಬ್ಯಾನರ್ಜಿ ಇಂದು ಭಾಬಾನಿಪುರ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 30 ರಂದು ಮತದಾನ ನಡೆಯಲಿದೆ ಮತ್ತು ಅಕ್ಟೋಬರ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಚುನಾವಣಾ ಆಯೋಗ ತಿಳಿಸಿದೆ.

ಸಾಂವಿಧಾನಿಕ ಬಿಕ್ಕಟ್ಟನ್ನು ತಪ್ಪಿಸಲು ರಾಜ್ಯ ಸರ್ಕಾರ ಮನವಿ ಮಾಡಿದ ನಂತರ ಚುನಾವಣಾ ಆಯೋಗವು ಕಳೆದ ವಾರ ಉಪಚುನಾವಣೆಯನ್ನು ಘೋಷಿಸಿದ ನಂತರ ದಕ್ಷಿಣ ಕೋಲ್ಕತ್ತಾ ಕ್ಷೇತ್ರದಲ್ಲಿ ಟಿ.ಎಂ.ಸಿ.ಯ ಪ್ರಚಾರ ನಡೆಯುತ್ತಿದೆ.

key words: Bhabanipur by-election: West Bengal CM Mamata Banerjee to file nomination today