ಮ್ಯಾಂಚೆಸ್ಟರ್’ನಲ್ಲಿ ಇಂದಿನಿಂದ ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ

ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯ ಇಂದಿನಿಂದ ಆರಂಭ ವಾಗಲಿದೆ.

2-1 ಮುನ್ನಡೆಯಲ್ಲಿರುವ ಕೊಹ್ಲಿ ಪಡೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಗೆದ್ದು ಸರಣಿ ಜಯಭೇರಿ ಮೊಳಗಿಸಲು ಕಠಿಣ ತಾಲೀಮು ನಡೆಸಿದೆ.

ಓಲ್ಡ್‌ ಟ್ರಾಫರ್ಡ್‌ ಅಂಗಳ ಭಾರತಕ್ಕೆ ಈವರೆಗೆ ಗೆದ್ದಿಲ್ಲ. ಪಂದ್ಯ ಕನಿಷ್ಠ ಡ್ರಾದಲ್ಲಿ ಅಂತ್ಯವಾದರೂ ಸರಣಿ ಟೀಂ ಇಂಡಿಯಾ ಮಡಿಲಿಗೆ ಬೀಳಲಿದೆ.

ಪಂದ್ಯಕ್ಕೆ ಮೊದಲೆರಡು ದಿನ ಮಳೆ ಭೀತಿ ಇರುವುದರಿಂದ ಭಾರತಕ್ಕೆ ಲಾಭ ಹೆಚ್ಚು. ಸರಣಿಯನ್ನು ಸಮ ಬಲಕ್ಕೆ ತರಬೇಕಾದರೆ ಇಂಗ್ಲೆಂಡಿಗೆ ಗೆಲುವು ಅನಿವಾರ್ಯ.

ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಮಾಡಿಕೊಂಡರೆ ಇಂಗ್ಲೆಂಡ್‌ನ‌ಲ್ಲಿ ಟೆಸ್ಟ್‌ ಸರಣಿ ಜಯಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ ವಿರಾಟ್‌ ಕೊಹ್ಲಿ ಅವರದಾಗಲಿದೆ.

key words: India-England final Test from today