Sunday, October 18, 2026

Dasara Wishes

Happy Dasara
Home Front Page ಶಾಲಾ ಪ್ರಾರಂಭೋತ್ಸವ: ಬಿದುರು ಬೊಂಬೆಗಳನ್ನ ತಾವೇ ಹೊತ್ತು ಮೆರವಣಿಗೆ ಮೂಲಕ ವಿದ್ಯಾರ್ಥಿಗಳನ್ನ ಸ್ವಾಗತಿಸಿದ ಬಿಇಓ.

ಶಾಲಾ ಪ್ರಾರಂಭೋತ್ಸವ: ಬಿದುರು ಬೊಂಬೆಗಳನ್ನ ತಾವೇ ಹೊತ್ತು ಮೆರವಣಿಗೆ ಮೂಲಕ ವಿದ್ಯಾರ್ಥಿಗಳನ್ನ ಸ್ವಾಗತಿಸಿದ ಬಿಇಓ.

ನಂಜನಗೂಡು,ಸೆಪ್ಟಂಬರ್,6,2021(www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ 6ರಿಂದ 8ನೇ ತರಗತಿಗಳು ಭೌತಿಕವಾಗಿ ಪ್ರಾರಂಭವಾಗಿದ್ದು,  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳದಕೇರಿ  ಶಾಲಾ ಪ್ರಾರಂಭೋತ್ಸವದಲ್ಲಿ ಶಾಲಾ ಮಕ್ಕಳನ್ನು ಬಿ.ಇ.ಓ ಸಿ.ಎನ್ ರಾಜು  ಸ್ವತಃ ಬಿದುರು ಬೊಂಬೆಗಳನ್ನು ತಾವೇ ಹೊತ್ತುಕೊಂಡು ಶಾಲಾ ಮಕ್ಕಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿದರು.

ಹಾಗೆಯೇ ನಂಜನಗೂಡು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಲಹುಂಡಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನ ಗ್ರಾಮದ ಮಹಿಳೆಯರು ಮತ್ತು ಮಹಿಳಾ ಪೋಷಕರು ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರ್ಣಕುಂಭ ಸ್ವಾಗತ  ಕೋರುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿಎನ್ ರಾಜು, ಶಿಕ್ಷಣ ಸಂಯೋಜಕರು ರಮೇಶ್, ಸಿಆರ್ ಪಿ ನಾಗರಾಜು, ಪೋಷಕರು ಹಾಗೂ ಶಿಕ್ಷಕರು ಹಾಜರಿದ್ದರು.

Key words: School- Opening Students -welcome -mysore