Saturday, October 24, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ‘ಅಂತರಾಷ್ಟ್ರೀಯ ವಿಮಾನ’ಗಳ ಸಂಚಾರ ನಿಷೇಧ ಸೆಪ್ಟೆಂಬರ್ 30ರವರೆಗೂ ವಿಸ್ತರಣೆ

‘ಅಂತರಾಷ್ಟ್ರೀಯ ವಿಮಾನ’ಗಳ ಸಂಚಾರ ನಿಷೇಧ ಸೆಪ್ಟೆಂಬರ್ 30ರವರೆಗೂ ವಿಸ್ತರಣೆ

ಬೆಂಗಳೂರು, ಆಗಸ್ಟ್, 29, 2021 (www.justkannada.in): ಭಾರತದಿಂದ ಹೊರಡುವ ಮತ್ತು ಆಗಮಿಸುವಂತ ಅಂತಾರಾಷ್ಟ್ರೀಯ ನಿಗದಿತ ವಾಣಿಜ್ಯ ಪ್ರಯಾಣಿಕರ ವಿಮಾನಗಳ ಮೇಲಿನ ಅಮಾನತನ್ನು ಸರ್ಕಾರ ಭಾನುವಾರ (ಆಗಸ್ಟ್ 29) ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ( Covid-19 pandemic ) ಕಳೆದ ವರ್ಷ ಮಾರ್ಚ್ 23 ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ.

ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಆಗಸ್ಟ್ 31, 2021ರಂದು ಕೊನೆಗೊಳ್ಳಬೇಕಿತ್ತು. ಆದಾಗ್ಯೂ, ಮೂರನೇ ಅಲೆಯ ಕಳವಳಗಳ ನಡುವೆ ಅಮಾನತು ಮತ್ತಷ್ಟು ವಿಸ್ತರಿಸಲಾಗಿದೆ.

ಇತ್ತೀಚಿನ ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 30, 2021 ರ ಭಾರತೀಯ ಪ್ರಮಾಣಿತ ಸಮಯ (ಐಎಸ್ ಟಿ) 2359 ಗಂಟೆಯವರೆಗೆ ನಿಷೇಧ ಜಾರಿಯಲ್ಲಿರಲಿದೆ.