Sunday, August 23, 2026

BDA Apartments

Home Front Page ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ದೂರು ಕೊಡದಿರುವುದೇ ಅತ್ಯಾಚಾರಿಗಳಿಗೆ ಪ್ಲಸ್ ಪಾಯಿಂಟ್ !

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ದೂರು ಕೊಡದಿರುವುದೇ ಅತ್ಯಾಚಾರಿಗಳಿಗೆ ಪ್ಲಸ್ ಪಾಯಿಂಟ್ !

ಬೆಂಗಳೂರು, ಆಗಸ್ಟ್, 29, 2021 (www.justkannada.in): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಕಿರಾತಕರು ಬಾಯ್ಬಿಟ್ಟರು ಪೊಲೀಸರೆ ಶಾಕ್ ಆಗುವ ವಿಚಾರ ಬೆಳಕಿಗೆ ಬಂದಿದೆ.

ಹಿಂದಿನ ಪ್ರಕರಣದಲ್ಲಿ ಪೊಲೀಸರಿಗೆ ದೂರು‌ ಕೊಡದಿರುವುದೇ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿದೆ. ಈ ಹಿಂದೆ ಸಾಕಷ್ಟು ದರೋಡೆ ಪ್ರಕರಣಗಳನ್ನ ನಡೆಸಿದ್ದರು. ಆದರೆ ಯಾರು ಕೂಡ ಮರ್ಯಾದೆಗೆ ಅಂಜಿ ದೂರು ಕೊಡಲು‌ ಮುಂದಾಗಿಲ್ಲ. ದೂರು ಕೊಟ್ಟರೆ ಮರ್ಯಾದೆ ಹೋಗುತ್ತೆ ಎಂದು ದೂರು ನೀಡಿಲ್ಲ ಎನ್ನಲಾಗಿದೆ.

ತಾವು ಮಾಡುವ ಕ್ರೈಂ ಪೊಲೀಸರಿಗೆ ಗೊತ್ತಾಗುತ್ತಿಲ್ಲ ಎಂಬುದೆ ಇವರಿಗೆ ಪದೇ ಪದೇ ಕ್ರೈಂ ಮಾಡಲು ಪ್ರೇರಣಯಾಗಿದೆ, ಈ ಹಿಂದೆ ನಡೆದ ಪ್ರಕರಣದಲ್ಲಿ ಯಾರದರು ಒಬ್ಬರು ದೂರು ಕೊಟ್ಟಿದ್ದರೆ ಈ ರೀತಿ ಕೃತ್ಯ ನಡೆಯುತ್ತಿರಲಿಲ್ಲ‌‌‌. ಈ ಕಾರಣದಿಂದಲೆ ನಮಗೆ ಮೈಸೂರಿನ ಈ ಸ್ಥಳ ಸೇಫ್ ಎಂದು ಕೊಂಡಿದ್ದ ಕಿರಾತಕರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಆರೋಪಿಗಳಲ್ಲಿ ಓರ್ವನಿಗೆ ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಳ್ಳುವ ಚಟ. ಐವರಲ್ಲಿ ಓರ್ವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇನ್ನುಳಿದವರು ಚಿನ್ನ, ಹಣಕ್ಕೆ ಆಸೆ ಬೀಳುತ್ತಿದ್ದರಂತೆ ಎಂಬ ವಿಷಯ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.