Sunday, September 20, 2026

BDA Apartments

ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ: ರಾಜಕಾರಣಿಗಳ ಹಸ್ತಕ್ಷೇಪದಿಂದಲೇ ಈ ರೀತಿಯ ...
Home Cinema ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ: ರಾಜಕಾರಣಿಗಳ ಹಸ್ತಕ್ಷೇಪದಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿವೆ- ಇಂದ್ರಜಿತ್ ಲಂಕೇಶ್

ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ: ರಾಜಕಾರಣಿಗಳ ಹಸ್ತಕ್ಷೇಪದಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿವೆ- ಇಂದ್ರಜಿತ್ ಲಂಕೇಶ್

ಮೈಸೂರು,ಆಗಸ್ಟ್,27,2021(www.justkannada.in): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿರುವ ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್, ಸಂಪೂರ್ಣ ಈ ಘಟನೆಯಲ್ಲಿ ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ. ರಾಜಕಾರಣಿಗಳ ಹಸ್ತಕ್ಷೇಪವು ಇದೆ. ಇದರಿಂದಲೇ ಈ ರೀತಿಯ ಘಟನೆ ಆಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಅದರಂತೆ ಇವತ್ತು ನಿಮಗೆ ಸಾಕ್ಷಿ ಸಮೇತ ಮಾಹಿತಿ ಸಿಗುತ್ತಿದೆ‌ ನೋಡಿ. ಐತಿಹಾಸಿಕ ಹಿನ್ನಲೆ ಇರುವ ಮೈಸೂರು ಇಂದು ಈ ಸ್ಥಿತಿಗೆ ಬಂದಿದೆ. ನಾನು ಕೂಡ ಮೈಸೂರಿನಲ್ಲಿ ಶೂಟಿಂಗ್‌ ಮಾಡಿದ್ದೇನೆ. ಮೈಸೂರಿನಲ್ಲಿ ಹಲ್ಲೆಗಳಾಗಿದೆ, ದರೋಡೆ, ಗ್ಯಾಂಗ್ ರೇಪ್ ಘಟನೆ ಆಗಿದೆ‌. ಇದು ಮೈಸೂರನ್ನ ಡಿಸ್ಟರ್ಬ್ ಮಾಡಿದೆ ಎಂದರು.

ರಾಜಕಾರಣಿಗಳು ತಾಲೀಬಾನ್‌ ಗಳಿಗೆ ಹೋಲಿಸುತ್ತಿದ್ದಾರೆ. ಮತ್ತೇ ಕೆಲವರು ಯುವಕ ಯುವತಿ ಹೋಗಿದ್ದೆ ತಪ್ಪು ಎನ್ನುತ್ತಿದ್ದಾರೆ. ಈ ಮಧ್ಯೆ  ರಾಜಕಾರಣಿಗಳು ಏನು ಮಾತಾಡುತ್ತಿದ್ದಾರೆ? ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಎಲ್ಲರು ನೋಡ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ ಎಂದರು.

ದೆಹಲಿಯಲ್ಲಿ ನಿರ್ಭಯ ಅಂತ ಕರೆಯುತ್ತಿದ್ದರು, ನಾನು ಇಲ್ಲಿ ಮಾನಿನಿ ಅಂತ ಕರೆಯುತ್ತೇನೆ.

ಇನ್ನು ದೆಹಲಿಯಲ್ಲಿ ನಿರ್ಭಯ ಅಂತ ಕರೆಯುತ್ತಿದ್ದರು. ನಾನು ಇಲ್ಲಿ ಮಾನಿನಿ ಅಂತ ಕರೆಯುತ್ತೇನೆ. ಮಾನಿನಿ ಅಂದರೆ‌ ಮಾನ ಎತ್ತಿ ಹಿಡಿಯುವ ಯುವತಿ ಎಂದರ್ಥ. ಹಾಗಾಗಿ ಈ ಪ್ರಕರಣದಲ್ಲಿ ನಾನು ಯುವತಿಗೆ ಮಾನಿನಿ ಅಂತ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

ಅತ್ಯಾಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಬೋರ್ಡ್ ಹಾಕಬೇಕಿದೆ. ಇಂದು ಬಸ್ ನಿಲ್ದಾಣದ ಬೋರ್ಡ್‌ನಲ್ಲಿ ಹಾಕಬೇಕು. ಇದೇ ಸ್ಥಳದಲ್ಲಿ ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಹಾಕ್ತಾರೆ. ಆದರೆ ಅತ್ಯಾಚಾರಕ್ಕೆ  ಯಾವ ಶಿಕ್ಷೆ ಎಂದು ಬೋರ್ಡ್ ಹಾಕಬೇಕಿದೆ‌ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

Key words: incident- police-not – blame-intervention – politicians- Indrajit Lankesh –mysore-gangrape