Sunday, August 23, 2026

BDA Apartments

Home Front Page ಮೈಸೂರಿನಲ್ಲಿ ಗನ್ ಹಿಡಿದ ಗೃಹ ಸಚಿವ ಅರಗ ಜ್ಞಾನೇಂದ್ರ.

ಮೈಸೂರಿನಲ್ಲಿ ಗನ್ ಹಿಡಿದ ಗೃಹ ಸಚಿವ ಅರಗ ಜ್ಞಾನೇಂದ್ರ.

ಮೈಸೂರು,ಆಗಸ್ಟ್,27,2021(www.justkannada.in): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಗಂಭೀರತೆ ಪಡೆದುಕೊಂಡಿದ್ದು ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಮೈಸೂರಿಗೆ ಆಗಮಿಸಿರುವ  ಗೃಹ ಸಚಿವ ಅರಗ ಜ್ಞಾನಂದ್ರ, ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿ ಫೈರಿಂಗ್ ಸಿಮ್ಯುಲೇಟರ್‌ ಉದ್ಘಾಟನೆ ಮಾಡಿದ್ದಾರೆ.

ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿ ಅಲ್ಲಿಯೇ ತಿರುಗಾಡಿಕೊಂಡು ಕಟ್ಟಡ ಹಾಗೂ ವ್ಯವಸ್ಥೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ಪಡೆದುಕೊಂಡರು. ಮಾಡೆಲ್ ಪೊಲೀಸ್ ಸ್ಟೇಷನ್, ಮೂಡ್ ಕೋರ್ಟ್, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ಸೇರಿ ವ್ಯವಸ್ಥೆ ಬಗ್ಗೆ ಗೃಹ ಸಚಿವರು ಸಮಾಲೋಚನೆ ನಡೆಸಿದರು.

ಸಿಮ್ಯುಲೇಟರ್‌ ಚೇಂಬರ್‌ ನಲ್ಲಿ ಸಚಿವರಿಗೆ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್ ಅವರು ಮಾಹಿತಿ ನೀಡಿದರು. ಇದೇ ವೇಳೆ  ಫೈರಿಂಗ್ ಸಿಮ್ಯುಲೇಟರ್‌ ಉದ್ಘಾಟನೆ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಗನ್ ಹಿಡಿದು ಪೋಟೊಗೆ ಪೋಸ್ ನೀಡುತ್ತಾ ಶೂಟಿಂಗ್ ಪ್ರಾಕ್ಟೀಸ್  ಮಾಡಿದರು.

Key wprds: Inauguration – firing simulator-Home Minister -Arag Gnanendra-mysore