Saturday, August 22, 2026

BDA Apartments

Home Crime ಮೈಸೂರಿನಲ್ಲಿ ಹೆಚ್ಚುತ್ತಿರುವ ಕ್ರೈಂರೇಟ್ : ಸ್ಟೀಲ್ ಅಂಗಡಿಯಲ್ಲಿ ಕಳ್ಳತನ ಮಾಡಿ ಸಾಕ್ಷಿ ನಾಶಪಡಿಸಿದ ಖತರ್ನಾಕ್ ಖದೀಮರು.

ಮೈಸೂರಿನಲ್ಲಿ ಹೆಚ್ಚುತ್ತಿರುವ ಕ್ರೈಂರೇಟ್ : ಸ್ಟೀಲ್ ಅಂಗಡಿಯಲ್ಲಿ ಕಳ್ಳತನ ಮಾಡಿ ಸಾಕ್ಷಿ ನಾಶಪಡಿಸಿದ ಖತರ್ನಾಕ್ ಖದೀಮರು.

ಮೈಸೂರು,ಆಗಸ್ಟ್,24,2021(www.justkannada.in): ಮೈಸೂರಿನಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದ್ದು, ಖತರ್ನಾಕ್ ಖದೀಮರ ಕಳ್ಳತನದ ಕೈಚಳಕ ಮುಂದುವರೆದಿದೆ. ನಿನ್ನೆಯಷ್ಟೆ ನಗರದ ವಿದ್ಯಾರಣ್ಯಪುರಂನ ಚಿನ್ನದಂಗಡಿ ದರೋಡೆ ಮಾಡಿದ್ದ ಕಳ್ಳರು ಸಿಕ್ಕಿ ಬೀಳುವ ಭಯದಲ್ಲಿ ಅಮಾಯಕ ಯುವಕನೊಬ್ಬನಿಗೆ ಗುಂಡು ಹಾರಿಸಿದ್ದರು ಇದರಿಂದ ಯುವಕ ಸಾವನ್ನಪ್ಪಿದ್ದನು.

ಈ ಮಧ್ಯೆ ಇದೀಗ ಮೈಸೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.  ಖತರ್ನಾಕ್ ಖದೀಮರು ಸ್ಟೀಲ್ ಅಂಗಡಿಯಲ್ಲಿ ಕಳ್ಳತನ ಮಾಡಿ, ಸಾಕ್ಷಿ ನಾಶ ಮಾಡಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರೋಡ್  ಬಳಿ ನಡೆದಿದೆ. ಇಲ್ಲಿನ ಶ್ರೀನಿವಾಸ ಸ್ಟೀಲ್ ಮತ್ತು ಹಾರ್ಡ್ ವೇರ್ ನಲ್ಲಿ  ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಅಂಗಡಿಯ ರೋಲಿಂಗ್ ಶೆಟ್ಟರ್ ಮೀಟಿ ಒಳ ನುಗ್ಗಿರುವ ಕಳ್ಳರು. ನಗದು, ಕಂಪ್ಯೂಟರ್ ಸಿಸ್ಟಂ ಸೇರಿದಂತೆ ಕೆಲವು ವಸ್ತು ದೋಚಿದ್ದಾರೆ. ಇದೇ ವೇಳೆ ಪೋಲಿಸರಿಗೆ ಸಿಕ್ಕಿ ಬೀಳಬಾರದೆಂದು ಕಳ್ಳರು ಸಿಸಿಟಿವಿ‌ಯ ಹಾರ್ಡ್ ಡಿಸ್ಕ್ ಮತ್ತು ಮಾನಿಟರ್ ಅನ್ನ ಹೊತ್ತೊಯ್ದಿದ್ದಾರೆ. ಅಲ್ಲದೆ ಕಳ್ಳರು ಸಿಸಿಟಿವಿ ಕ್ಯಾಮರಾವನ್ನೂ ಒಡೆದು ಹಾಕಿದ್ದು, ಈ ಕುರಿತು ಮೈಸೂರಿನ ಕುವೆಂಪುನಗರ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

Key words: theft- Steel Store- Destroying- Witness-mysore