Sunday, August 23, 2026

BDA Apartments

Home Front Page ಕ್ರಿಕೆಟ್’ಗೂ ತಟ್ಟಿದೆ ಅಫ್ಘಾನಿಸ್ಥಾನದ ಅರಾಜಕತೆ ! ಪಾಕಿಸ್ಥಾನ ನಡುವಿನ ಏಕದಿನ ಸರಣಿ ಸ್ಥಳಾಂತರ

ಕ್ರಿಕೆಟ್’ಗೂ ತಟ್ಟಿದೆ ಅಫ್ಘಾನಿಸ್ಥಾನದ ಅರಾಜಕತೆ ! ಪಾಕಿಸ್ಥಾನ ನಡುವಿನ ಏಕದಿನ ಸರಣಿ ಸ್ಥಳಾಂತರ

ಬೆಂಗಳೂರು, ಆಗಸ್ಟ್ 24, 2021 (www.justkannada.in): ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ನಡುವಿನ ಏಕದಿನ ಸರಣಿ ಇದೀಗ ಪಾಕಿಸ್ಥಾನಕ್ಕೆ ಸ್ಥಳಾಂತರವಾಗಿದೆ.

ಶ್ರೀಲಂಕಾದ ಹಂಬನ್ ತೋಟ ಮೈದಾನದಲ್ಲಿ ನಡೆಯಬೇಕಿದ್ದ ಸರಣಿ ಅಫ್ಘಾನಿಸ್ಥಾನ ತಂಡದ ಪ್ರಯಾಣ ಸಮಸ್ಯೆಯಿಂದ ಸ್ಥಳಾಂತರವಾಗಿದೆ.

ಸರಣಿಯನ್ನು ಶ್ರೀಲಂಕಾದ ಹಂಬಂಟೋಟಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ದೃಡಪಡಿಸಿದೆ.

ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್‌ನಿಂದ ಯಾವುದೇ ವಾಣಿಜ್ಯ ವಿಮಾನಗಳು ಹೊರಡುತ್ತಿಲ್ಲ. ಜತೆಗೆ ಶ್ರೀಲಂಕಾ ಶುಕ್ರವಾರ 10 ದಿನಗಳ ಲಾಕ್‌ಡೌನ್ ಘೋಷಿಸಿದೆ. ಹೀಗಾಗಿ ಸರಣಿ ಪಾಕಿಸ್ಥಾನಕ್ಕೆ ಸ್ಥಳಾಂತರವಾಗಿದೆ.