ಮೈಸೂರು,ಅಕ್ಟೋಬರ್,22,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವಾಗ ವೇದಿಕೆಯ ಮೇಲೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿಕೆ ಶಿವಕುಮಾರ್ ಅವರ ಪತ್ನಿಯೂ ಪುಷ್ಪಾರ್ಚನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ್ದಾರೆ. ಮೈಸೂರು ಮಹಾರಾಣಿಯರು ಕೂಡ ಪುಷ್ಪಾರ್ಚನೆ ಮಾಡಲು ವೇದಿಕೆ ಹತ್ತುತ್ತಿರಲಿಲ್ಲ. ಸಿಎಂ ಪತ್ನಿಗೆ ಏನು ಪ್ರೋಟೋ ಕಾಲ್ ಇದೆ ಅವರು ಯಾಕೆ ಪುಷ್ಪಾರ್ಚನೆ ಮಾಡಿದರು? ಅವರನ್ನು ತಡೆಯುವ ಶಕ್ತಿ ಡಿಸಿಗೆ ಇರಲಿಲ್ವಾ ? ಎಂದು ಸಿಎಂ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾಡಳಿತದ ನಡೆಗೆ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದರು.
ಮೈಸೂರು ದಸರಾದಲ್ಲಿ ಇಡೀ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಒಂದು ಸಚಿವರನ್ನು ತಡೆಯೋದು. ಮತ್ತೊಂದು ಕಡೆ ಪುಷ್ಪಾರ್ಚನೆಗೆ ಬೇರೆಯವರನ್ನು ಬಿಟ್ಟುಕೊಳ್ಳೋದು. ಡಿಜಿಪಿ ಸಲೀಂ ಕೆಳಗಡೆ ನಿಂತಿದ್ದಾರೆ. ಮೈಸೂರು ಕಮಿಷನರ್ ವೇದಿಕೆಯ ಮೇಲೆ ಪುಷ್ಪಾರ್ಚನೆ ಮಾಡಿದ್ದಾರೆ. ಮುಸ್ಲಿಂ ಅಂತ ಅವರನ್ನು ವೇದಿಕೆಗೆ ಬಿಡಲಿಲ್ವಾ ?. ದಸರಾದಲ್ಲಿ ಅವರಿಗೆ ಹೇಗೆ ಬೇಕು ಹಾಗೆ ಶಿಷ್ಟಾಚಾರ ಮಾಡಿಕೊಂಡಿದ್ದಾರೆ. ಇದನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
CM’s wife, Jamboo savari, MLA Srivatsa, criticizes.







