Thursday, August 13, 2026

BDA Apartments

Home Front Page ಮೈಸೂರಿನ ಲಾಗೈಡ್ ವತಿಯಿಂದ ಅಗಲಿದ ಹಿರಿಯ ವಕೀಲರಿಗೆ ನುಡಿನಮನ

ಮೈಸೂರಿನ ಲಾಗೈಡ್ ವತಿಯಿಂದ ಅಗಲಿದ ಹಿರಿಯ ವಕೀಲರಿಗೆ ನುಡಿನಮನ

ಮೈಸೂರು, ಆ.18, 2021 : (www.justkannada.in news) ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟ ಹಿರಿಯ ವಕೀಲ ಎಸ್ ಜೆ ಲಕ್ಷ್ಮೇಗೌಡ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಮೈಸೂರಿನ ‘ ಲಾ ಗೈಡ್ ‘ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಜಿ ಟಿ ದೇವೇಗೌಡ,  ಲಕ್ಷ್ಮೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಜಿ ಟಿ ದೇವೇಗೌಡ,  ದಿವಂಗತ ಲಕ್ಷ್ಮೇಗೌಡರ ಜತೆಗಿನ ತಮ್ಮ ಒಡನಾಟ ಮೆಲುಕು ಹಾಕಿದರು‌. ಹಿರಿಯ ವಕೀಲರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕ  ಹೆಚ್ ಎನ್ ವೆಂಕಟೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಲಾಗೈಡ್ ಮಾಸಪತ್ರಿಕೆ ಸಂಪಾದಕ ಹೆಚ್ ಎನ್ ವೆಂಕಟೇಶ್, ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ ಆರ್ ಚಂದ್ರಮೌಳಿ ಹಿರಿಯ ವಕೀಲರಾದ ಎಂ ಡಿ ಹರೀಶ್ ಕುಮಾರ್ ಹೆಗ್ಡೆ, ಹೆಚ್ ವಿ ಶ್ರೀನಾಥ್, ಜಿ ವಿ ರಾಮಮೂರ್ತಿ, ಎಸ್ ಲೋಕೇಶ್ ಸೇರಿ ಹಲವು ಹಿರಿಯ ಕಿರಿಯ ವಕೀಲರು ಭಾಗಿಯಾಗಿದ್ದರು.

key words : mysore-advocate-law-court-nudi-namana