Sunday, August 23, 2026

BDA Apartments

Home Front Page ಲಾರ್ಡ್ಸ್ ಗೆಲುವಿನ ಗುಟ್ಟು ಬಿಚ್ಚಿಟ್ಟ ಕ್ಯಾಪ್ಟನ್ ಕೊಹ್ಲಿ

ಲಾರ್ಡ್ಸ್ ಗೆಲುವಿನ ಗುಟ್ಟು ಬಿಚ್ಚಿಟ್ಟ ಕ್ಯಾಪ್ಟನ್ ಕೊಹ್ಲಿ

ಬೆಂಗಳೂರು, ಆಗಸ್ಟ್ 17, 2021 (www.justkannada.in): ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತದ ಗೆಲುವಿನ ಗುಟ್ಟನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಗೆಲುವಿಗೆ ಪ್ರೇರಣೆಯಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

ಆಂಗ್ಲರ ಚಕಮಕಿ ತೀವ್ರಗೊಂಡಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಪಡೆ ಸಹಜವಾಗಿಯೇ ಹೆಚ್ಚು ಪ್ರೇರಣೆಗೊಂಡು ದಿಗ್ವಿಜಯ ಸಾಧಿಸಿತು ಎಂದು ಕೊಯ್ಲಿ ಹೇಳಿಕೊಂಡಿದ್ದಾರೆ.

ಇಶಾಂತ್ ಶರ್ಮಾ, ಸಿರಾಜ್ ಅಂತಹ ಲಾರ್ಡ್ಸ್ ಮೈದಾನದಲ್ಲಿ ಅದ್ಬುತ ಪ್ರದರ್ಶನ ತೋರಿದ್ದಾರೆ. ಇದು ಕೂಡ ಗೆಲುವಿನ ಹಾದಿಯನ್ನು ಸರಳ ಮಾಡಿತು ಎಂದು ಕೊಹ್ಲಿ ತಿಳಿಸಿದ್ದಾರೆ.