ಎಟಿಪಿ ರ್‍ಯಾಂಕಿಂಗ್‌: 334 ವಾರ ನಂ.1 ಸ್ಥಾನ ಭದ್ರ, ಫೆಡರರ್ ದಾಖಲೆ ಮುರಿದ ಜೊಕೋವಿಕ್

ಬೆಂಗಳೂರು, ಆಗಸ್ಟ್ 17, 2021 (www.justkannada.in): ಎಟಿಪಿ ರ್‍ಯಾಂಕಿಂಗ್‌ನಲ್ಲಿ ಜೊಕೋವಿಕ್ ಬರೋಬ್ಬರಿ 334 ವಾರ ಕಾಲ ನಂ.1 ಸ್ಥಾನದಲ್ಲಿ ಉಳಿದು ದಾಖಲೆ ಬರೆದಿದ್ದಾರೆ.

ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್ ಜೊಕೋವಿಕ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ.

ಮುಂದಿನ ಯುಎಸ್ ಓಪನ್‌ನಲ್ಲೂ ಜೊಕೋವಿಕ್ ಚಾಂಪಿಯನ್ ಆದರೆ ಈ ವರ್ಷದ ಕೊನೆವರೆಗೂ ನಂ.1 ಸ್ಥಾನದಲ್ಲೇ ಮುಂದುವರಿಯುವ ನಿರೀಕ್ಷೆಯಿದೆ.

ಈ ಮೂಲಕ ಎಟಿಪಿ ವಿಶ್ವ ನಂ.1 ಸ್ಥಾನದಲ್ಲಿ 334 ವಾರಗಳನ್ನು ಕಳೆದಿರುವ ನೊವಾಕ್ ಜೊಕೋವಿಕ್ ಅವರು ಸ್ವಿಜರ್‌ಲ್ಯಾಂಡ್ ದಂತಕತೆ ರೋಜರ್ ಫೆಡರರ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ.