Wednesday, July 29, 2026

BDA Apartments

Home Front Page ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌: ನಾಲ್ಕನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಹಿಮಾ ದಾಸ್

ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌: ನಾಲ್ಕನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಹಿಮಾ ದಾಸ್

ನವದೆಹಲಿ, ಜುಲೈ 19, 2019 (www.justkannada.in): ಭಾರತದ ಓಟಗಾರ್ತಿ ಹಿಮಾ ದಾಸ್‌ ಚಿನ್ನದ ಭೇಟೆ ಮುಂದುವರೆಸಿದ್ದಾರೆ.

ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಮತ್ತೊಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಆ ಮೂಲಕ ಕೇವಲ 15 ದಿನಗಳ ಅಂತರದಲ್ಲಿ ಹಿಮಾದಾಸ್‌ ನಾಲ್ಕನೇ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200ಮೀ. ಓಟವನ್ನು ಭಾರತದ ಹಿಮಾ ದಾಸ್‌ ಅವರು 23.25 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಮತ್ತೊಬ್ಬ ಓಟಗಾರ್ತಿ ವಿಸ್ಮಯ ಅವರು 200 ಮೀ ಅಂತರವನ್ನು 23.43 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.