Sunday, August 23, 2026

BDA Apartments

Home Cinema ಲಾರ್ಡ್ಸ್ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಶುರು ಮಾಡಿದ ಟೀಂ ಇಂಡಿಯಾ

ಲಾರ್ಡ್ಸ್ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಶುರು ಮಾಡಿದ ಟೀಂ ಇಂಡಿಯಾ

ಬೆಂಗಳೂರು, ಆಗಸ್ಟ್ 11, 2021 (www.justkannada.in): ಆ.12 ಗುರುವಾರದಿಂದ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಈಗಾಗಲೇ ಟೀಂ ಇಂಡಿತಾ ಲಂಡನ್‌ ತಲುಪಿದ್ದು. ಅಭ್ಯಾಸದಲ್ಲಿ ತೊಡಗಿದೆ. ಸೂರ್ಯಕುಮಾರ್‌ ಯಾದವ್‌ ಮತ್ತು ಪೃಥ್ವಿ ಶಾ ಕ್ವಾರಟೈನ್‌ ಅವಧಿ ಮುಕ್ತಾಯಗೊಳ್ಳದ ಹಿನ್ನೆಲೆಯಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿಯೇ ಉಳಿದಿದ್ದಾರೆ.

ಇವರ ಕ್ವಾರಂಟೈನ್‌ ಅವಧಿ ಆ.13ಕ್ಕೆ ಮುಕ್ತಾಯಗೊಳ್ಳಲಿದ್ದು ಆ. 14ರಿಂದ ಟೀಮ್‌ ಇಂಡಿಯಾ ಸದಸ್ಯರ ಜತೆ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ಆಟಗಾರರು ಮಂಗಳವಾರ ಹೊರಾಂಗಣ ಅಭ್ಯಾಸದಲ್ಲಿ ತೊಡಗಿಕೊಂಡರು. ಕೆಲ ಕಾಲ ರನ್ನಿಂಗ್‌ ಅಭ್ಯಾಸ ನಡೆಸಿ ಬಳಿಕ ನೆಟ್ಸ್‌ನಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು.