Saturday, August 15, 2026

BDA Apartments

Home Front Page ಚಿಕನ್, ಮಟನ್’ಗಿಂಡಲೂ ಗೋಮಾಂಸ ತಿನ್ನಿ ಎಂದ್ಹೇಳಿ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಸಚಿವ !

ಚಿಕನ್, ಮಟನ್’ಗಿಂಡಲೂ ಗೋಮಾಂಸ ತಿನ್ನಿ ಎಂದ್ಹೇಳಿ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಸಚಿವ !

ಬೆಂಗಳೂರು, ಆಗಸ್ಟ್ 1, 2021 (www.justkannada.in): ಚಿಕನ್, ಮಟನ್, ಮೀನಿಗಿಂತಲೂ ಹೆಚ್ಚು ಗೋಮಾಂಸ ತಿನ್ನಿ ಎಂದು ಹೇಳುವ ಮೂಲಕ ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲೈ ಇಕ್ಕಟ್ಟಿಗೆ ಸಿಲುಕಿದ್ದಾರೆ.

ನಾನಂತೂ ಚಿಕನ್, ಮಟನ್ ಗಿಂತಲೂ ಗೋಮಾಂಸ ತಿನ್ನಿ ಎಂದೇ ಪ್ರೋತ್ಸಾಹಿಸುತ್ತೇನೆ. ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತದೆಂಬ ಗ್ರಹಿಕೆ ತುಂಬ ಜನರಿಗೆ ಇದೆ. ಗೋಮಾಂಸ ತಿನ್ನಲು ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತೇವೆ ಎಂದು ಸ್ಯಾನ್ಬೋರ್ ಶುಲೈ ಹೇಳಿದ್ದಾರೆ.

ಮೇಘಾಲಯಕ್ಕೆ ಜಾನುವಾರುಗಳ ಸಾಗಣೆ ಮಾಡುವುದರ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಳಿ ಮಾತನಾಡುತ್ತೇನೆ ಎಂದು ಮೇಘಾಲಯ ಸಚಿವ ಶುಲ್ಲೈ ತಿಳಿಸಿದ್ದಾರೆ.