Friday, August 14, 2026

BDA Apartments

Home Cinema ಅಕ್ಟೋಬರ್ ಅಥವಾ ಡಿಸೆಂಬರ್’ನಲ್ಲಿ ಕೆಜಿಎಫ್-2 ತೆರೆಗೆ ?

ಅಕ್ಟೋಬರ್ ಅಥವಾ ಡಿಸೆಂಬರ್’ನಲ್ಲಿ ಕೆಜಿಎಫ್-2 ತೆರೆಗೆ ?

ಬೆಂಗಳೂರು, ಜುಲೈ 17, 2021 (www.justkannada.in): ಬಹು ನಿರೀಕ್ಷಿತ ಕೆಜಿಎಫ್ 2 ರಿಲೀಸ್ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ನಡುವೆ ರಾಕಿ ಭಾಯ್ ಯಾವಾಗ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಾರೆ ಎನ್ನುವುದನ್ನು ಚಿತ್ರತಂಡವೇ ಬಹಿರಂಗ ಪಡಿಸಬೇಕಿದೆ. ಈ ಸಂಬಂಧ ಅಭಿಮಾನಿಗಳಿಂದಲೂ ಸಾಕಷ್ಟು ಒತ್ತಡ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಸಿನಿಮಾ ಅಕ್ಟೋಬರ್ ಅಥವಾ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಜುಲೈ 16 ಕೆಜಿಎಫ್-2 ಚಿತ್ರಮಂದಿರಕ್ಕೆ ಬರಬೇಕಾಗಿದ್ದ ದಿನ. ಇವತ್ತಾದರೂ ಚಿತ್ರದ ಹೊಸ ಬಿಡುಗಡೆ ದಿನಾಂಕ ಸಿಗಬಹುದೇನೋ ಎಂದು ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದರು. ಆದರೆ ಇಂದು ಕೂಡ ಯಾವುದೇ ಸುದ್ದಿ ಹೊರ ಬಂದಿಲ್ಲ.

ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ಚಿತ್ರದ ಬಗ್ಗೆ ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.